ಬೆಂಗಳೂರು: ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೆಸರಲ್ಲಿ10ಕ್ಕೂ ಹೆಚ್ಚು ಹೆರಿಗೆ ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ನಗರದಲ್ಲಿ ಸುಮಾರು 28 ಪಾಲಿಕೆ ಹೆರಿಗೆ ಆಸ್ಪತ್ರೆಗಳು ಇದ್ದು, ಅವುಗಳಲ್ಲಿ 10 ಹೆರಿಗೆ ಆಸ್ಪತ್ರೆ ಗಳು ಕಳೆದ 8-9 ತಿಂಗಳಿಂದ ಬಂದ್ ಆಗಿವೆ.
ಬಡವರು, ಕೂಲಿ ಕಾರ್ಮಿಕ ಮಹಿಳೆಯರಿಗೆ, ಜನಸಾಮಾನ್ಯರಿಗೆ ಕಡಿಮೆ ಖರ್ಚಿನಲ್ಲಿ ಹೆರಿಗೆ ಮಾಡಿಸುವ ಪಾಲಿಕೆ ಆಸ್ಪತ್ರೆಗಳ ಬಾಗಿಲು ಮುಚ್ಚಿರುವುದರಿಂದ ಸ್ಥಳೀಯ ಬಡ, ಮಧ್ಯಮ ವರ್ಗದ ಮಹಿಳೆಯರ ಹೆರಿಗೆಗೆ ಆಸ್ಪತ್ರೆ ಇಲ್ಲದಂತಾಗಿದೆ. ಅನಿರ್ವಾಯ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆ ಗೆ ಹೆರಿಗೆ ಎಂದು ಹೋದರೆ ಲಕ್ಷಾಂತರ ಹಣ ಖರ್ಚಾಗುತ್ತದೆ. ಇದರಿಂದ ಸಾಮಾನ್ಯಜನರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ.

ಸದ್ಯ ನಗರದಲ್ಲಿ ಅಭಿವೃದ್ಧಿ ಹೆಸರಲ್ಲಿ ಬಂದ್ ಆಗಿರುವ ಹೆರಿಗೆ ಆಸ್ಪತ್ರೆ ಗಳು ನೋಡೋದಾದರೆ: ಕೆಂಪೇಗೌಡ ನಗರ, ಚಾಮರಾಜಪೇಟೆ, ಶಾಂತಿನಗರ, ತಿಮ್ಮಯ್ಯ ರಸ್ತೆ ಹೆರಿಗೆ ಅಸ್ಪತ್ರೆ, ಬೊಬ್ಬತ್ತಿ ಹೆರಿಗೆ ಆಸ್ಪತ್ರೆ, ಜಯನಗರ ಹೆರಿಗೆ ಆಸ್ಪತ್ರೆ, ಅಡುಗೋಡಿ, ಯಡಿಯೂರು, ಆಜಾದ್ ನಗರ, ಯಶವಂತಪುರ ಇಲ್ಲಿ ಇರುವ ಮಹಿಳೆಯರು ಹೆರಿಗೆಗೆ ಸಮಯ ಬಂದರೆ ದೂರದ ಏರಿಯಾಗಳಿಗೆ ಹೋಗಬೇಕಾಗಿರುವ ಪರಿಸ್ಥಿತಿ ಉಂಟಾಗಿದೆ.
ಹಾಗಾದರೆ ನಗರಪಾಲಿಕೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಒತ್ತಡಕ್ಕೆ ಮಣಿದ್ರ? ಅಥವಾ ನಗರಪಾಲಿಕೆಯಲ್ಲಿ ಆಸ್ಪತ್ರೆ ಕಟ್ಟೋದಕ್ಕೆ ಹಣ ಇಲ್ಲಾವಾ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದು, ಅಭಿವೃದ್ಧಿ ಹೆಸರಲ್ಲಿ 8-9 ತಿಂಗಳಿಂದ ಆಸ್ಪತ್ರೆ ಕಟ್ಟಿಲ್ಲ. ಸರ್ಕಾರದಲ್ಲಿ ಗ್ಯಾರಂಟಿ ಯೋಜನೆ ಹೆಸರಲ್ಲಿ ಆಸ್ಪತ್ರೆ ಗಳ ಅಭಿವೃದ್ಧಿಗೆ ಹಣ ಇಲ್ಲಾವಾ? ಹೀಗೆ ಆದರೆ ಸಾಮಾನ್ಯ ಜನರು ಹೆರಿಗೆ ಮಾಡಿಸೋದಕ್ಕೂ ಕಷ್ಟಸಾಧ್ಯವಾಗುವ ಪರಿಸ್ಥಿತಿ ಉಂಟಾಗುತ್ತದೆ.
ಇದನ್ನೂ ಓದಿ : ಹಾಸನ ; ಹೊಸ ವರ್ಷದ ದಿನವೇ ಜವರಾಯನ ಅಟ್ಟಹಾಸ | ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವು!



















