ಬೆಂಗಳೂರು: ಸದ್ಯ ಡಿಜಿಟಲ್ ಅನ್ನುವುದು ಎಲ್ಲ ರಂಗಗಳಿಗೂ ಕಾಲಿಟ್ಟಿದೆ. ಹೀಗಾಗಿ ರಾಜ್ಯ ಸಾರಿಗೆ ಇಲಾಖೆ ಕೂಡ ಇದಕ್ಕೆ ಒಗ್ಗಿ ಕೊಡಿದೆ. ಇದನ್ನು ಬಿಎಂಟಿಸಿ ಹೆಚ್ಚು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದು, ಅದಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಡಿಜಿಟಲ್ ಪೇಮೆಂಟ್ (Digital Payment)ಗೆ ಬಿಎಂಟಿಸಿ ಹೆಚ್ಚು ಒತ್ತು ನೀಡಿದ ಹಿನ್ನೆಲೆಯಲ್ಲಿ ಜನರು ಅದಕ್ಕೆ ಹೆಚ್ಚು ಆಕರ್ಷಿತರಾಗಿದ್ದಾರೆ. ಬಿಎಂಟಿಸಿಯ ಆರು ಸಾವಿರ ಬಸ್‌ಗಳಲ್ಲೂ ಕ್ಯೂಆರ್ ಸಿಸ್ಟಮ್ ಮೂಲಕ ಟಿಕೆಟ್ ಪೇಮೆಂಟ್ ನೀಡುವ ವ್ಯವಸ್ಥೆ ಜಾರಿ ಮಾಡಿದೆ.
ಈ ಮೂಲಕ ಒಂದು ದಿನಕ್ಕೆ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿಗೆ ಒಂದು ಕೋಟಿ ರೂ. ಆದಾಯ ಗಳಿಸುತ್ತಿದೆ. ಆನ್‌ಲೈನ್ ಕ್ಯೂಆರ್ ಕೋಡ್ ಮೂಲಕ ಬಿಎಂಟಿಸಿ ಫೆಬ್ರವರಿ 1-16ರವರೆಗೆ 16 ಕೋಟಿ ರೂ. ಆದಾಯ ಮಾಡಿಕೊಂಡಿದೆ. 2024ರಲ್ಲಿ ಕ್ಯೂಆರ್ ಕೋಡ್‌ನಿಂದ 100 ಕೋಟಿ ರೂ. ಆದಾಯ ಬಂದಿದೆ.
ಜನವರಿ 5ರಿಂದ ಬಸ್ ದರ ಏರಿಕೆಯಾದಾಗಿನಿಂದ ಚಿಲ್ಲರೆ ಸಮಸ್ಯೆ ತಪ್ಪಿಸಲು ಹೆಚ್ಚು ಜನ ಡಿಜಿಟಲ್ ಪೇಮೆಂಟ್ ಗೆ ಮೊರೆ ಹೋಗಿದ್ದಾರೆ. ಹೀಗಾಗಿ ಬಸ್ ಚಾಲಕ ಹಾಗೂ ನಿರ್ವಾಹಕ ಹೆಚ್ಚು ನಿರಾಳರಾಗಿದ್ದಾರೆ. ಬಿಎಂಟಿಸಿಯ ಒಟ್ಟು ಆದಾಯದಲ್ಲಿ ಶೇ. 35ರಷ್ಟು ಆದಾಯ ಕ್ಯೂ ಆರ್ ಕೋಡ್ ನಿಂದ ಹರಿದು ಬರುತ್ತಿದೆ ಎನ್ನಲಾಗಿದೆ.