ನವದೆಹಲಿ : ಏಷ್ಯನ್ ಗೇಮ್ಸ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೂಗಟ್ ಅವರ 2024ರ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಜೀವಂತವಾಗಿದೆ.
ಟಿಯಾಲದಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಕುಸ್ತಿ ಟ್ರಯಲ್ಸ್ ನಲ್ಲಿ ಮೂರು ಗಂಟೆಗಳ ಕಾಲ ನಡೆದ ಹೈಡ್ರಾಮಾದಲ್ಲಿ 53 ಹಾಗೂ 50 ಕೆಜಿ ಎರಡೂ ವಿಭಾಗದಲ್ಲಿ ಟ್ರಯಲ್ಸ್ ಗೆ ಒಪ್ಪಿಗೆ ನೀಡುವಂತೆ ಪಟ್ಟು ಹಿಡಿದಿದ್ದರು. ಅನುಮತಿ ನೀಡಿದ ನಂತರವೇ ಕಣಕ್ಕಿಳಿಯಲು ಮುಂದಾದರು. 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಫೋಗಟ್ ಈ ಬಾರಿ 50 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು.
53 ಕೆಜಿ ವಿಭಾಗದಲ್ಲಿ ವಿನೇಶ್ ಕೇವಲ 18 ಸೆಕೆಂಡ್ ಗಳಲ್ಲಿಯೇ ಪರಾಭವಗೊಂಡರು. ಪ್ರತಿಸ್ಪರ್ಧಿ ಅಂಜು ಅವರನ್ನು ಸೋಲಿಸಿದರು. 50 ಕೆಜಿ ವಿಭಾಗದಲ್ಲಿ ಎದುರಾಳಿ ಶಿವಾನಿಯನ್ನು ಸೋಲಿಸಿದರು. 53 ಕೆಜಿ ವಿಭಾಗದಲ್ಲಿ 1-4ರಲ್ಲಿ ಸೋತಿದ್ದ ವಿನೇಶ್ ನಂತರ ಶಿವಾನಿ ವಿರುದ್ಧ 11-6 ಅಂಕಗಳೊಂದಿಗೆ ಗೆದ್ದು ಕಂಬ್ಯಾಕ್ ಮಾಡಿದರು. ಒಲಿಂಪಿಕ್ಸ್‌ಗೂ ಮುನ್ನ ಕಿರ್ಗಿಸ್ತಾನದ ಬಿಷ್ಕೆಕ್ ನಲ್ಲಿ ನಡೆಯಲಿರುವ ಏಷ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್‌ನಲ್ಲಿ ಫೋಗಟ್ ಭಾಗವಹಿಸಬೇಕಿದೆ.
ಟೋಕಿಯೊ ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟುಗಳಾದ ಬಜರಂಗ್ ಪೂನಿಯ, ರವಿ ದಹಿಯಾ ಈ ವರ್ಷದ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ಜು.26ರಿಂದ ಆಗಸ್ಟ್ 11ರ ವರೆಗೆ ನಡೆಯಲಿದೆ.