ರಾಜಕೀಯ ನಾಯಕರು ಇತ್ತೀಚೆಗೆ ಜನರನ್ನು ಮೆಚ್ಚಿಸುವುದಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪ್ರಶ್ನಾತೀತ ನಾಯಕರನ್ನು ಬಳಕೆ ಮಾಡಿಕೊಳ್ಳುವ ಖಯಾಲಿಗೆ ಬಿದ್ದಿದ್ದಾರೆ. ಆಪ್ ಕೂಡ ಭಗತ್ ಸಿಂಗ್ ರನ್ನು ಬಳಕೆ ಮಾಡಿಕೊಂಡು ಅವಮಾನ ಮಾಡಿದೆ. ಇದನ್ನು ಪ್ರಶ್ನಿಸಿದ ಅವರ ಮೊಮ್ಮಗನಿಗೂ ಅವಮಾನ ಮಾಡಿದೆ.
ಡೆಲ್ಲಿ ಮದ್ಯ ಹಗರಣದಲ್ಲಿ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದಾರೆ. ಹೀಗಾಗಿ ಆಪ್ ನಾಯಕರು ಬಿಜೆಪಿ ವಿರುದ್ಧ ಬೀದಿಗೆ ಇಳಿದಿದ್ದಾರೆ. ಅರವಿಂದ್ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಜೈಲಿನಲ್ಲಿ ಕುಳಿತು ಕೇಜ್ರಿವಾಲ್ ನೀಡಿದ ಸಂದೇಶವೊಂದನ್ನು ತಿಳಿಸುವ ವಿಡಿಯೋ ಮಾಡಿದ್ದರು. ಈ ವಿಡಿಯೋದಲ್ಲಿ ಸುನೀತಾ ಅವರ ಹಿಂದೆ ಕಂಬಿಯ ಹಿಂದೆ ಕೇಜ್ರಿವಾಲ್ ಇರುವ ಫೋಟೋ ಹಾಕಲಾಗಿತ್ತು. ಅಲ್ಲದೇ, ಅವರ ಫೋಟೋದ ಒಂದು ಬದಿ ಭಗತ್ ಸಿಂಗ್ ಹಾಗೂ ಇನ್ನೊಂದು ಬದಿ ಅಂಬೇಡ್ಕರ್ ಫೋಟೋ ಹಾಕಲಾಗಿತ್ತು. ಇದನ್ನು ಗಮನಿಸಿದ ಭಗತ್ ಸಿಂಗ್ ಅವರ ಮೊಮ್ಮಗ ಯದ್ವಿಂದರ್ ಸಂಧು ಪ್ರಶ್ನಿಸಿದ್ದರು.
ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಜೊತೆಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭಾವಚಿತ್ರವನ್ನು ಪ್ರದರ್ಶಿಸುವುದನ್ನು ಕಂಡು ನನಗೆ ಭಯವಾಯಿತು. ಇವರು ದಂತಕಥೆಯೊಂದಿಗೆ ಹೋಲಿಕೆ ಮಾಡಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಭಗತ್ ಸಿಂಗ್ ದೇಶದ ಜನರಿಗಾಗಿ ತಮ್ಮ ಜೀವನ ತ್ಯಾಗ ಮಾಡಿದವರು. ಆದರೆ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ. ಹೀಗಾಗಿ ಅವರೊಂದಿಗೆ ಇವರನ್ನು ಹೋಲಿಕೆ ಮಾಡುವುದು ಎಷ್ಟು ಸರಿ? ಇದು ಭಗತ್ ಸಿಂಗ್ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಫೋಟೋದ ಹಿಂದೆ ಕೂಡ ಷಡ್ಯಂತ್ರ ಅಡಗಿರುವಂತೆಯೇ ಭಾಸವಾಗುತ್ತಿದೆ. ಕೇಜ್ರಿವಾಲ್ ಈಗ ಜೈಲಿನಲ್ಲಿದ್ದಾರೆ. ಅವರು ಭಗತ್ ಸಿಂಗ್ ಹಾಗೂ ಅಂಬೇಡ್ಕರ್ ರೀತಿಯ ವ್ಯಕ್ತಿತ್ವದ ನಾಯಕ ಎಂದು ಬಿಂಬಿಸುವ ಉದ್ಧೇಶ ಕೂಡ ಇದರಲ್ಲಿದೆ. ಇದೇ ದೃಷ್ಟಿಯಿಂದ ಆಪ್ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂದೇಶ ಹಾಕಲು ಆರಂಭಿಸಿದ್ದರು. ಇದನ್ನು ಭಗತ್ ಸಿಂಗ್ ಮೊಮ್ಮಗ ಪ್ರಶ್ನಿಸಿದ್ದರು. ಕೋಪಗೊಂಡ ಆಪ್, ಭಗತ್ ಸಿಂಗ್ ಗೆ ಮದುವೆಯಾಗಿರಲಿಲ್ಲ. ಅವರಿಗೆ ಮೊಮ್ಮಗ ಹೇಗೆ ಬಂದ ಎಂದು ಹಲವರು ಪ್ರಶ್ನಿಸಿದ್ದಾರೆ. ಇದಕ್ಕೂ ಕೂಡ ಯದ್ವಿಂದರ್ ಸಂಧು ತೀಕ್ಷ್ಮವಾಗಿಯೇ ಉತ್ತರಿಸಿದ್ದು, ಭಗತ್ ಸಿಂಗ್ ಅವರ ಕಿರಿಯ ಸಹೋದರ ನಮ್ಮ ಅಜ್ಜ. ಹೀಗಾಗಿ ನಾನು ಅವರ ಮೊಮ್ಮಗ. ನಾನಷ್ಟೇ ಅಲ್ಲ ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟವರೆಲ್ಲ ಭಗತ್ ಸಿಂಗ್ ವಂಶಸ್ಥರು ಎಂದು ಹೇಳಿ ಆಪ್ ಕಪಾಳ ಮೋಕ್ಷ ಮಾಡಿದಂತೆ ಮಾತನಾಡಿದ್ದಾರೆ. ಜನ ಗೌರವಿಸುವ ದಂತಕಥೆಯ ನಾಯಕರೊಂದಿಗೆ ತಮ್ಮನ್ನು ತಾವು ಹೋಲಿಕೆ ಮಾಡಿಕೊಳ್ಳುವ ನಾಯಕರ ಇಂತಹ ಮನಸ್ಥಿತಿ ಎಷ್ಟು ಸರಿ? ನೀವೇ ಉತ್ತರಿಸಬೇಕಿದೆ…..