ರಸ್ತೆ ಅಪಘಾತದಲ್ಲಿ ಪಾಕ್ ನ ಇಬ್ಬರು ಮಹಿಳಾ ಕ್ರಿಕೆಟ್ ಆಟಗಾರರು ಗಾಯಗೊಂಡಿರುವ ಘಟನೆ ನಡೆದಿದೆ.
ಬಿಸ್ಮಾ ಮರೂಫ್ ಹಾಗೂ ಗುಲಾಮ್ ಫಾತಿಮಾ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತಿಳಿಸಿದೆ. ಆದರೆ, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಿಸಿಬಿ ವೈದ್ಯಕೀಯ ತಂಡ ಇಬ್ಬರ ಆರೈಕೆ ಮಾಡುತ್ತಿದೆ ಎಂದು ಮಂಡಳಿ ತಿಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆಯಲಿರುವ ಸರಣಿಗೆ ಇಬ್ಬರೂ ಆಟಗಾರ್ತಿಯರು ಸಂಭಾವ್ಯ ತಂಡದಲ್ಲಿ ಸೇರಿದ್ದಾರೆ ಎಂದು ಪಿಸಿಬಿ ಹೇಳಿದೆ. ಬಿಸ್ಮಾ ಮರೂಫ್ 133 ಏಕದಿನ ಪಂದ್ಯಗಳನ್ನಾಡಿದ್ದು 20 ಅರ್ಧಶತಕಗಳ ಸಹಿತ 3,278 ರನ್ ಗಳಿಸಿದ್ದಾರೆ. ಅಲ್ಲದೇ, 44 ವಿಕೆಟ್ ಪಡೆದಿದ್ದಾರೆ. 140 ಟಿ20 ಪಂದ್ಯಗಳಲ್ಲಿ 2893 ರನ್ ಹಾಗೂ 36 ವಿಕೆಟ್ ಕೂಡ ಉರುಳಿಸಿದ್ದಾರೆ. ಗುಲಾಮ್ ಫಾತಿಮಾ 15 ಏಕದಿನ ಪಂದ್ಯಗಳಲ್ಲಿ 27 ವಿಕೆಟ್ ಹಾಗೂ 5 ಟಿ20 ಪಂದ್ಯಗಳಲ್ಲಿ 2 ವಿಕೆಟ್ ಪಡೆದಿದ್ದಾರೆ.