ಮಂಡ್ಯ: ಮಂಡ್ಯದಲ್ಲಿ ಮೈತ್ರಿ ಟಿಕೆಟ್ ನನಗೆ ಸಿಗುವ ಭರವಸೆ ಇದೆ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ 100 ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಸಿಗಲಿದೆ. ಯಶ್-ದರ್ಶನ್ ದೊಡ್ಡ ಶಕ್ತಿ ಬರುವುದಿದ್ದರೂ ಸ್ವಾಗತ ಮಾಡುತ್ತೇನೆ. ಸದ್ಯಕ್ಕೆ ದೆಹಲಿಗೆ ಹೋಗುವ ಯಾವ ಅವಶ್ಯಕತೆ ಇಲ್ಲ. ಬರಲು ಹೇಳಿದರೆ ಮಾತ್ರ ಹೋಗುತ್ತೇನೆ. ಆದರೆ, ಟಿಕೆಟ್ ನನಗೆ ಸಿಗಲಿದೆ ಎಂದು ಹೇಳಿದ್ದಾರೆ.
ಮಂಡ್ಯದಲ್ಲಿ ನನ್ನ ಮನೆ ಇದೆ. ಅದು ರೆಂಟ್ ಮನೆ. ಅಂಬರೀಶ್ ಇದ್ದ ಕಾಲದಿಂದಲೂ ಮಂಡ್ಯದಲ್ಲಿ ಬಾಡಿಗೆ ಮನೆಯಲ್ಲಿ ಇದ್ದೇವೆ. ಅಂಬರೀಶ್ ಅವರು ಎಲೆಕ್ಷನ್ ಗೆದ್ದವರು ಸಾಧಕ-ಬಾಧಕ ಗೊತ್ತಿದೆ. ಕಳೆದ ಬಾರಿ ನಾನು ನಿಂತಿದ್ದು ಪಕ್ಷೇತರ ಅಭ್ಯರ್ಥಿಯಾಗಿ. ಯಾವುದೇ ಒಂದು ಅನುಭವ ಇಲ್ಲದೆ ಚುನಾವಣೆಗೆ ನಿಂತಿದ್ದೆ. ನನಗೆ ಬೇಕಾದವರು ನಿಮ್ಮ ಜೊತೆ ಇರುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಮತ್ತೆ ಸ್ಪರ್ಧಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಯಶ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲ್ಲ ಎಂಬ ಕುರಿತು ಮಾತನಾಡಿದ ಅವರು, ರಾಜಕಾರಣ ಗಲೀಜು ಎಂದು ಬೇಸರಿಸಿಕೊಂಡಿದ್ದಾರೆ. ಅವರು ಬರುತ್ತೇನೆ ಎಂದರೆ ಸಂತೋಷವಾಗಿ ಸ್ವಾಗತಿಸುತ್ತೇನೆ. ಅವರಿಬ್ಬರೂ ನನ್ನೊಂದಿಗೆ ಜೊತೆಯಾಗಿ ನಿಂತಿದ್ದಾರೆ. ಅವರು ಬರಲಿಲ್ಲ ಅಂದರೂ ನಾನು ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.


















