ಭಾರತ ಎಲ್ಲ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದೆ….ಆರ್ಥಿಕವಾಗಿ ಅಷ್ಟೇ ಅಲ್ಲದೇ, ತಂತ್ರಜ್ಞಾನದಲ್ಲಿ ಕೂಡ ಸೈ ಎನಿಸಿಕೊಳ್ಳುತ್ತಿದೆ. ಕಳೆದ 10 ವರ್ಷಗಳಿಂದ ಭಾರತ ಆತ್ಮನಿರ್ಭರ ಅಥವಾ ರಕ್ಷಣಾ ರಫ್ತಿನಲ್ಲಿ ಸ್ವಾವಲಂಬಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ರಕ್ಷಣಾ ರಫ್ತು ಇದೇ ಮೊದಲ ಬಾರಿಗೆ 21 ಸಾವಿರ ಕೋಟಿ ರೂಪಾಯಿ ಗಡಿ ದಾಟಿದೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಿದ್ದೇ ತಡ ರಕ್ಷಣಾ ವಲಯದಲ್ಲಿ ಬಹುದೊಡ್ಡ ಕ್ರಾಂತಿಯೇ ಆರಂಭವಾಯಿತು. ಈಗ ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಆಗುವುದು ಅಷ್ಟೇ ಅಲ್ಲ. ರಫ್ತಿನ ವಿಷಯದಲ್ಲಿ ಗರಿ ಮೆತ್ತಿಕೊಳ್ಳುತ್ತಿದೆ. ಭಾರತವು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳಿಂದ ಹಿಡಿದು ಫಿರಂಗ ಗನ್ ಗಳವರೆಗೆ ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದೆ. ಪರಿಣಾಮ 2023-24ರ ಹಣಕಾಸು ವರ್ಷದಲ್ಲಿ ಶಸ್ತ್ರಾಸ್ತ್ರ ರಫ್ತು 21,083 ಕೋಟಿ ರೂ.ಗೆ ತಲುಪಿದೆ. ಕೇಂದ್ರ ಸರ್ಕಾರದ ರಕ್ಷಣಾ ರಫ್ತುಗಳನ್ನು ಹೆಚ್ಚಿಸುವ ಗುರಿಗೆ ಇದು ಗರಿ ನೀಡಿದೆ. ಈಗ ಭಾರತದ ರಕ್ಷಣಾ ಪರಿಕರಗಳನ್ನು ವಿವಿಧ ದೇಶಗಳು ಸ್ಪರ್ಧೆಗಿಳಿದಂತೆ ಖರೀದಿಸುತ್ತಿವೆ.
2024-25ರ ವೇಳೆಗೆ ವಾರ್ಷಿಕ ರಕ್ಷಣಾ ರಫ್ತಿನಲ್ಲಿ 35 ಸಾವಿರ ಕೋಟಿ ರೂ.ಗಳನ್ನು ತಲುಪುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಈಗಾಗಲೇ ಭಾರತವು ಇಟಲಿ, ಮಾಲ್ಡೀವ್ಸ್, ರಷ್ಯಾ, ಶ್ರೀಲಂಕಾ, ಯುಎಇ, ಫಿಲಿಲ್ಲಿನ್ಸ್, ಸೌದಿ ಅರೇಬಿಯಾ, ಪೋಲೆಂಡ್, ಈಜಿಪ್ಟ್, ಇಸ್ರೇಲ್, ಸ್ಪೇನ್, ಚಿಲಿ ಸೇರಿದಂತೆ ಬರೋಬ್ಬರಿ 85 ರಾಷ್ಟ್ರಗಳಿಗೆ 85 ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತದೆ. ಹೀಗಾಗಿಯೇ ಮೊದಲ ಬಾರಿಗೆ ರಕ್ಷಣಾ ರಫ್ತಿನಿಂದಲೇ 21 ಸಾವಿರ ಕೋಟಿ ರೂ. ಗಳಿಕೆ ಮಾಡಿದೆ.
ಆಕಾಶ್ ಕ್ಷಿಪಣಿ ವ್ಯವಸ್ಥೆಗಳು, ಡೋರ್ನಿಯರ್ 228 ವಿಮಾನಗಳು, ಎಲ್ ಎಚ್ ಹೆಲಿಕಾಪ್ಟರ್ ಗಳು, ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿಗಳು, ಗಸ್ತು ನೌಕೆಗಳು, ಮಾನವ ರಹಿತ ವ್ಯವಸ್ಥೆಗಳು, ರಾಡಾರ್ ಗಳು, ಸಿಮ್ಯುಲೇಟರ್ ಗಳು, ಸ್ಫೋಟಗಳು, ಏವಿಯಾನಿಕ್ಸ್, ಕಣ್ಗಾವಲು ವ್ಯವಸ್ಥೆಗಳು, ಬುಲೆಟ್-ಪ್ರೂಫ್ ಏರ್ ಕ್ರಾಫ್ಟ್ ಗಳ ಜಾಕೆಟ್ ಗಳು, ಕಾಪ್ಟರ್ ಗಳು ಮತ್ತು ಬಾಡಿ-ಪ್ರೂಫ್ ವಿಮಾನಗಳು 85 ದೇಶಗಳಿಗೆ ರಫ್ತಾಗುತ್ತಿವೆ.
ರಕ್ಷಣಾ ವ್ಯವಸ್ಥೆಯ ರಫ್ತು ಹೆಚ್ಚಾಗುತ್ತಿದ್ದಂತೆ ರಕ್ಷಣಾ ಉದ್ಯಮ ಉತ್ತೇಜಿಸುವ ಮೂಲಕ ಅಮದಿನ ಮೇಲಿನ ತನ್ನ ಅವಲಂಬನೆ ಬದಲಾಯಿಸುವ ಗುರಿ ಭಾರತಕ್ಕಿದೆ. ತನ್ನ ಶಸ್ತ್ರಾಸ್ತ್ರ ರಫ್ತುಗಳನ್ನು ಹೆಚ್ಚಿಸುವ ಭಾರತದ ಪ್ರಯತ್ನಗಳಿಗೆ ಸಾರ್ವಜನಿಕ ಮತ್ತು ಖಾಸಗಿ ವಲಯಗಳೆರಡೂ ಕೊಡಗೆ ನೀಡುತ್ತಿವೆ. ಹೀಗಾಗಿ ರಫ್ತಿಗಿಂತ ಆಮದು ಕಡಿಮೆಯಾಗುತ್ತಿದೆ.
ರಕ್ಷಣಾ ವಸ್ತುಗಳ ರಫ್ತು ಇತ್ತೀಚಿನ ವರ್ಷಗಳಲ್ಲಿ ತೀವ್ರ ಏರಿಕೆ ಕಂಡಿದ್ದು, 2013-14ರಲ್ಲಿ 686 ಕೋಟಿ ರೂ.ಗಳಿಂದ 2023-24ರಲ್ಲಿ 21,083 ಕೋಟಿ ರೂ.ಗೆ ಏರಿಕೆಯಾಗಿದೆ. ಬರೋಬ್ಬರಿ 100 ಸಂಸ್ಥೆಗಳು ಭಾರತದಲ್ಲಿ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡುತ್ತಿವೆ. 2024-25ರ ರಕ್ಷಣಾ ಬಜೆಟ್ ಗೆ ಕೇಂದ್ರವು 6.21 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಹಿಂದಿನ ಹಣಕಾಸು ವರ್ಷದಲ್ಲಿ 5.94 ಲಕ್ಷ ಕೋಟಿ ರೂ.ಗಳಿಂದ ಶೇ. 4.3 ಹೆಚ್ಚಳವಾಗಿದೆ. ತನ್ನ ನೆರೆಯ ಪಾಕಿಸ್ತಾನ ಮತ್ತು ಚೀನಾದ ಅವಳಿ ಬೆದರಿಕೆಯ ಮಧ್ಯೆಯೂ ಭಾರತ ತನ್ನ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಿಸ್ತರಿಸುತ್ತಿರುವುದು ವಿರೋಧಿಗಳ ಬಾಯಿ ಮುಚ್ಚುವಂತೆ ಮಾಡಿದೆ.
ಜಗತ್ತಿನಲ್ಲಿ ಭಾರತದ ರಕ್ಷಣಾ ಪರಿಕರಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, 2028-29ರ ಆರ್ಥಿಕ ವರ್ಷದ ವೇಳೆಗೆ ರಕ್ಷಣಾ ರಫ್ತು 50 ಸಾವಿರ ಕೋಟಿ ರೂ. ಗೆ ತಲುಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ವಾರ್ಷಿಕ ರಕ್ಷಣಾ ಉತ್ಪಾದನೆಯು 3 ಲಕ್ಷ ಕೋಟಿ ರೂ.ಗೆ ತಲುಪಲಿದೆ ಎಂದು ಕೇಂದ್ರ ಸರ್ಕಾರ ನಿರೀಕ್ಷಿಸುತ್ತಿದೆ.
ಭಾರತದ ರಕ್ಷಣಾ ರಫ್ತಿನ ಮೇಲೆ ಹಲವು ದೇಶಗಳು ಭಾರೀ ನಂಬಿಕೆ ಇಟ್ಟುಕೊಂಡಿವೆ. ನೈಜೀರಿಯಾ ಹಾಗೂ ಅರ್ಜೆಂಟೀನಾದಿಂದ ಲಘು ಯುದ್ಧ ವಿಮಾನ, ತೇಜಸ್ ಹಾಗೂ 155 ಸಿಸಿ ಸುಧಾರಿತ ಟೋವೆಡ್ ಆರ್ಟಿಲರಿ ಗನ್ಸ್ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿಂದ ಲಘು ಯುದ್ಧ ವಿಮಾನ ತೇಜಸ್ ಅನ್ನು ರಫ್ತು ಮಾಡಲು 6 ದೇಶಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಅಷ್ಟೇ ಅಲ್ಲ, ಅರ್ಜೆಂಟೀನಾ, ಫಿಲಿಪ್ಪಿನ್ಸ್ ಹಾಗೂ ನೈಜೀರಿಯಾದೊಂದಿಗೆ ಮಾತುಕತೆಗಳು ವೇಗದಲ್ಲಿ ನಡೆಯುತ್ತಿವೆ.
ಪ್ರಧಾನಿ ಮೋದಿ ಅಧಿಕಾರಕ್ಕೆ ಬರುತ್ತಿದ್ದಂತೆ ಸೈನಿಕರ ರಕ್ಷಣೆಗೆ ಆದ್ಯತೆ ನೀಡಿದ್ದು. ಸೈನಿಕರಿಗೆ ಗುಂಡು ನಿರೋಧಕ ಜಾಕೆಟ್ ನೀಡಿ ಆತ್ಮವಿಶ್ವಾಸ ಹೆಚ್ಚಿಸಿದ್ದರು. ಸೈನಿಕರು ಕೂಡ ತಮ್ಮ ರಕ್ಷಣೆಯೊಂದಿಗೆ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ, ಜಪಾನ್, ಇಸ್ರೇಲ್ ಮತ್ತು ಬ್ರೆಜಿಲ್ ಸೇರಿದಂತೆ 34 ದೇಶಗಳಿಗೆ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಪೂರೈಸಲಾಗುತ್ತಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ ಮತ್ತು ಫ್ರಾನ್ಸ್ ನಂತಹ ಬಲಿಷ್ಠ ಸೇನೆ ಹೊಂದಿರುವ ರಾಷ್ಟ್ರಗಳು ಕೂಡ ಭಾರತದ ರಕ್ಷಣಾ ವಸ್ತುಗಳಿಗೆ ಕಾಯುತ್ತಿರುವುದು ಹಾಗೂ ಬೇಡಿಕೆ ಹೆಚ್ಚಿಸಿರುವುದು ಮೋದಿ ಅವರ ಆತ್ಮನಿರ್ಭರಕ್ಕೆ ಹಿಡಿದ ಕನ್ನಡಿಯಾಗಿದೆ. ಹಲವು ದೇಶಗಳು ಈಗಾಗಲೇ ರಫ್ತು ಮಾಡುವಂತೆ ಕೋರಿ ಒಪ್ಪಂದಗಳಿಗೆ ಸಹಿ ಹಾಕುತ್ತಿವೆ. ಇದೇ ಅಲ್ಲವೇ ಭಾರತ ವಿಶ್ವಗುರು ಆಗುತ್ತಿದೆ ಎನ್ನುವುದಕ್ಕೆ ಸಾಕ್ಷಿ!!