ಬಿಸಿಲಿನ ತಾಪದೊಂದಿಗೆ ಜನರನ್ನು ಕಂಗಾಲು ಮಾಡಿರುವ ಬೆಲೆ ಏರಿಕೆಯ ಮಧ್ಯೆ ಸಿಹಿ ಸುದ್ದಿಯೊಂದು ಸಿಕ್ಕಿದೆ.
ಗ್ರಾಹಕರು ಸೇರಿದಂತೆ ಹೋಟೆಲ್ ಉದ್ಯಮಿಗಳು ಕೂಡ ಸಂತಸ ಪಡುವಂತಾಗಿದೆ. ಈಗ ಅಕ್ಕಿಯ ದರ ಇಳಿಕೆಯಾಗಿದ್ದು, ಗ್ರಾಹಕರು ಸಂತಸ ಪಡುವಂತಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಮಾರುಕಟ್ಟೆಗೆ ತಂದಿದೆ. ಇದರ ಹೊರತಾಗಿಯೂ ನೆರೆಯ ರಾಜ್ಯದ ಹೊಸ ಭತ್ತ ಮಾರುಕಟ್ಟೆಗೆ ಬಂದಿದ್ದು, ಅಕ್ಕಿಯ ಬೆಲೆ ಇಳಿಕೆಯಾಗಿದೆ.
ಇದೆಲ್ಲಕ್ಕಿಂತ ಮುಖ್ಯವಾಗಿ ಅಕ್ಕಿಯ ದಾಸ್ತಾನು ಕುರಿತು ಪ್ರತಿ ವಾರ ಮಾಹಿತಿ ನೀಡಬೇಕೆಂದು ಕೇಂದ್ರ ಸೂಚಿಸಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಎಗ್ಗಿಲ್ಲದೆ ಅಕ್ಕಿ ಬಂದಿದ್ದು, ದರ ಇಳಿಕೆಯಾಗಿದೆ. ಕೇಂದ್ರದ ಭೀತಿಯಿಂದಾಗಿ ಹೆಚ್ಚಿನ ಮಾರಾಟಗಾರರು ದಾಸ್ತಾನು ಇಡುತ್ತಿಲ್ಲ. ಹೀಗಾಗೀ ಹೆಚ್ಚಿನ ಪ್ರಮಾಣದ ಅಕ್ಕಿ ಮಾರುಕಟ್ಟೆಗೆ ಬರುತಿರುವ ಹಿನ್ನಲೆಯಲ್ಲಿ ದರ ಇಳಿಕೆಯಾಗಿದೆ. ಸ್ಟೀಮ್ ರೈಸ್ ದರ ಕೆ.ಜಿ.ಗೆ 8 ರೂ.ವರೆಗೆ ಇಳಿಕೆಯಾಗಿದೆ. ಕಳೆದ ಫೆಬ್ರವರಿಯಲ್ಲಿ ಆರ್ ಎನ್ ಆರ್ ಸ್ಟೀಮ್ ರೈಸ್ ದರ ಕೆ.ಜಿ.ಗೆ 57-58 ರೂ. ಇತ್ತು. ಸದ್ಯ ಇದರ ದರ 48 ರೂ. ನಿಂದ 49 ರೂ.ಗೆ ಇಳಿದಿದೆ.
ಸೋನಾ ಸ್ಟೀಮ್ ಅಕ್ಕಿ ದರ ಕೂಡ 56 ರೂ. ಇದ್ದದ್ದು ಸದ್ಯ 47 ರೂ.ಗೆ ಇಳಿಕೆಯಾಗಿದೆ. ಕರ್ನಾಟಕದಲ್ಲಿ ರಾಯಚೂರು, ಗಂಗಾವತಿ, ಸಿರಗುಪ್ಪ, ಬಳ್ಳಾರಿ ಚಿತ್ರದುರ್ಗ, ದಾವಣಗೆರೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಆಗಮಿಸಿದ್ದು, ದರ ಇಳಿಕೆಗೆ ಕಾರಣವಾಗಿದೆ. ಪಕ್ಕದ ರಾಜ್ಯಗಳಾದ ಆಂಧ್ರ, ತಮಿಳುನಾಡು, ತೆಲಂಗಾಣದಿಂದ ಕೂಡ ಹೊಸ ಭತ್ತ ಬಂದಿದ್ದು, ದರ ಇಳಿಕೆಗೆ ಕಾರಣವಾಗಿದೆ. ರಾಜ್ಯದಲ್ಲಿ ಕೂಡ ಹೆಚ್ಚಿನ ಭತ್ತ ಉತ್ಪಾದನೆಯಾಗುತ್ತಿದೆ. ಅಕ್ಕಿಯ ದಾಸ್ತಾನಿನ ಮೇಲೆ ಕೇಂದ್ರ ಕಣ್ಣಿಟ್ಟಿರುವುದು ಹಾಗೂ ಭಾರತ್ ಅಕ್ಕಿಯೂ ಮಾರುಕಟ್ಟೆಯಲ್ಲಿ ಸಿಗುತ್ತಿರುವುದು ಕೂಡ ಅಕ್ಕಿಯ ಬೆಲೆ ಇಳಿಕೆಗೆ ಕಾರಣವಾಗಿದೆ.