ಕಾರವಾರ: ಯುವಕನೊಬ್ಬ ಸಾರಿಗೆ ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕ ಹಾಗೂ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಶಿರವಾಡ ಜಾಂಬಾ ಕ್ರಾಸ್ ಹತ್ತಿರ ನಡೆದಿದೆ. ಶಿರವಾಡದ ಸುಭಾಷ್ ಬಾಡಕರ್ ಎಂಬ ವ್ಯಕ್ತಿಯೇ ಗೂಂಡಾ ವರ್ತನೆ ತೋರಿದವ. ಸಾರಿಗೆ ಬಸ್ ಕಾರವಾರದಿಂದ ಸಿದ್ದರಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಸುಭಾಷ್ ಬಾಡಕರ್ ಶಿರವಾಡ ಜಾಂಬಾ ಕ್ರಾಸ್ ಹತ್ತಿರ ಬಸ್ ಮುಂದೆ ಬೈಕ್ ನಿಲ್ಲಿಸಿದ್ದಾನೆ. ಆಗ ದಾರಿ ಬಿಡುವಂತೆ ಹೇಳಿದ್ದಾರೆ. ಬೈಕ್ ನಿಲ್ಲಿಸಿದ್ದನ್ನು ವಿಚಾರಿಸಲು ಹೋದಾಗ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ಚಾಲಕ ಮಹಮ್ಮದ್ ಇಸಾಕ್ (28) ತಲೆಗೆ ಗಂಭೀರ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.