ಹೊಸಪೇಟೆಯಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಷ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪರಮ ಪವಿತ್ರ ರಾಮಮಂದಿರ ಲೋಕಾರ್ಪಣೆಯ ಆಮಂತ್ರಣವನ್ನು ತಿರಸ್ಕರಿಸಿದವರನ್ನು ಹನುಮ ಸ್ಥಳದ ಮತದಾರರು ಕ್ಷಮಿಸುವುದಿಲ್ಲ ಎಂದು ರಾಮ ಜನ್ಮಭೂಮಿ ನೆನೆದು, ಕಾಂಗ್ರೇಸ್ ವಿರುದ್ಧ ವಾಗ್ಧಾಳಿ ನಡೆಸಿದರು.
“ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿಯೇ ಹಿಂದೂಗಳ ಕನಸಾಗಿದ್ದ ರಾಮಮಂದಿರದ ನಿರ್ಮಾಣ ಆಗಬೇಕೆಂಬ ಕನಸು, ಸತತ ಐನೂರು ವರ್ಷಗಳ ನಂತರದಲ್ಲಿ ಸಾಕಾರಗೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಲೋಕಾರ್ಪಣೆಗೊಂಡಿದೆ. ಈ ಮಂದಿರದ ಹೋರಾಟದಲ್ಲಿ ಹಲವು ಪೀಳಿಗೆಗಳು ಜೀವ ತೆತ್ತಿದ್ದಾರೆ. ಅನೇಕ ಪೂರ್ವಜರು ಜೀವ ಸೆವೆಸಿದ್ದಾರೆ. ಅದೆಲ್ಲದರ ಫಲವಾಗಿ ಭವ್ಯ ಮಂದಿರ ನಿರ್ಮಾಣಗೊಂಡಿದೆ” ಎಂದರು. ನಮಗೆ ಸ್ವಾತಂತ್ರ್ಯ ಬಂದ ವರ್ಷದಲ್ಲೇ ಈ ಮಂದಿರ ನಿರ್ಮಾಣವಾಗಬೇಕಿತ್ತು; ಆದರೆ ಆಗಿರಲಿಲ್ಲ. ಅದು ಐನೂರು ವರ್ಷಗಳ ನಂತರ ಈಗ ಸಾಧ್ಯವಾಗಿದೆ. ಇದು ಕೇವಲ ನಿಮ್ಮಿಂದ, ನೀವು ಕೊಟ್ಟ ಮತದಿಂದ ಸಾಧ್ಯವಾಗಿದೆ” ಎಂದರು.
” ನಮ್ಮ ಪಾಲಿಗೆ ಪ್ರಭು ಶ್ರೀರಾಮನ ದರ್ಶನ ಗೌರವ ಹಾಗೂ ಹೆಮ್ಮೆಯ ಸಂಕೇತವಾದರೆ; ಅಂದು ಕಾಂಗ್ರೇಸ್ಸಿಗರು ಆಮಂತ್ರಣವನ್ನು ತಿರಸ್ಕರಿಸಿ ಲೋಕಾರ್ಪಣೆಗೆ ಗೈರಾದರು. ಇದು ರಾಮನಿಗೆ, ರಾಮ ಭಕ್ತರಿಗೆ ಮಾಡಿದ ಅವಮಾನ. ಇದನ್ನು ಹನಮ ಸ್ಥಳದ ಮತದಾರರು ಕ್ಷಮಿಸುವುದಿಲ್ಲ. ರಾಮ ಮಂದಿರ ಆಮಂತ್ರಣ ತಿರಸ್ಕರಿಸಿದವರನ್ನು ಮತದಾರರು ತಿರಸ್ಕರಿಸಿರಿ” ಎಂದು ಕರೆ ನೀಡಿದರು.