ದಿಲ್ಲಿಯ ಭಾರತ ಮಂಟಪದಲ್ಲಿ ನಡೆದ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಗಾಗಿ ಪ್ರಧಾನಿ ನರೇಂದ್ರ ಮೋದಿ ಒತ್ತಡ ನಿರ್ವಣೆಗೆ ‘ಸಪ್ತ ಸೂತ್ರ’ ಅನುಸರಿಸುವಂತೆ ಕರೆ ನೀಡಿದರು.
ಏಳನೇ ಆವೃತ್ತಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡದಿಂದ ಹೊರಬರಲು ಸಲಹೆಕೊಟ್ಟರು. ‘ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಮ್ಮೊಂದಿಗೆ ನೀವೇ ಸ್ಪರ್ಧೆ ಮಾಡಿ; ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಪರೀಕ್ಷೆಗೆ ಸಿದ್ಧರಿಗುವ ಪರಿಪಾಠ ಕೈಬಿಡಿ’ ಎಂದರು. ಪೋಷಕರು ಸಹ ವಿದ್ಯಾರ್ಥಿಗಳ ಮನೋಬಲಕ್ಕೆ ತಕ್ಕಂತೆ ವರ್ತಿಸುವಂತೆ ಕಿವಿಮಾತು ಹೇಳಿದರು. ಶಿಕ್ಷಕರು ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುತ್ತಾ ಅವರ ಮಾನಸಿಕ ಒತ್ತಡ ನಿವಾರಿಸುವ ನಿಟ್ಟಲ್ಲಿ ಪ್ರೇರೇಪಿಸಿ’ ಎಂದು ಸಲಹೆ ಇತ್ತರು.