ಐಪಿಎಲ್ ಟೂರ್ನಿಯ 42ನೇ ಪಂದ್ಯದಲ್ಲಿ ಪಂಜಾಬ್ ತಂಡವು ಕೆಕೆಆರ್ ವಿರುದ್ಧ ಟಿ20 ಇತಿಹಾಸದಲ್ಲಿಯೇ ದಾಖಲೆಯೊಂದನ್ನು ಸೃಷ್ಟಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಕೆಕೆಆರ್ ತಂಡ 262 ರನ್ ಗಳ ಗುರಿ ನೀಡಿತ್ತು. ಕಠಿಣ ಗುರಿ ಬೆನ್ನಟ್ಟಿದ್ದ ಪಂಜಾಬ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಇದು ಚೇಸಿಂಗ್ ನಲ್ಲಿನ ಬಹುದೊಡ್ಡ ದಾಖಲೆಯಾಗಿದೆ.
ಅಷ್ಟೇ ಅಲ್ಲ ಪಂಜಾಬ್ ಕಿಂಗ್ಸ್ ಬ್ಯಾಟ್ಸಮನ್ ಗಳು ಬರೋಬ್ಬರಿ 24 ಸಿಕ್ಸರ್ ಸಿಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಕೂಡ ಪಂಜಾಬ್ ಬರೆದಿದೆ. ಇದಕ್ಕೂ ಮುನ್ನ ಈ ದಾಖಲೆ ಹೈದರಾಬಾದ್ ಹೆಸರಿನಲ್ಲಿತ್ತು.
ಇದೇ ವರ್ಷದ ಟೂರ್ನಿಯಲ್ಲಿ ಆರ್ಸಿಬಿ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡ ಒಂದೇ ಇನಿಂಗ್ಸ್ನಲ್ಲಿ 22 ಸಿಕ್ಸರ್ ಸಿಡಿಸಿದ್ದ ಸಾಧನೆ ಮಾಡಿತ್ತು. ಈಗ ಪಂಜಾಬ್ ಈ ದಾಖಲೆ ಮುರಿದಿದೆ. ಪಂಜಾಬ್ ಪರ ಪ್ರಭ್ಸಿಮ್ರಾನ್ ಸಿಂಗ್ 5 ಸಿಕ್ಸ್, ಜಾನಿ ಬೈರ್ಸ್ಟೋವ್ 9, ರೈಲಿ ರೊಸ್ಸೊ 2, ಶಶಾಂಕ್ ಸಿಂಗ್ 8 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ.