ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ರಚಿನ್ ರವೀಂದ್ರಗೆ ನ್ಯೂಜಿಲೆಂಡ್ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ನೀಡಲಾಗಿದೆ.
2023 ನೇ ಸಾಲಿನ ನ್ಯೂಜಿಲೆಂಡ್‌ನ ಅತ್ಯುತ್ತಮ ಕ್ರಿಕೆಟಿಗರಾಗಿ ಆಯ್ಕೆಯಾಗಿರುವ ರಚಿನ್ ರವೀಂದ್ರಗೆ ಸರ್ ರಿಚರ್ಡ್ ಹ್ಯಾಡ್ಲಿ ಪದಕ ವಿತರಿಸಿದರು.
ಈ ಮೂಲಕ ಈ ಪದಕ ಪಡೆದ ಅತ್ಯಂತ ಕಿರಿಯ ಆಟಗಾರನಾಗಿ ರಚಿನ್ ದಾಖಲೆ ಬರೆದಿದ್ದಾರೆ. 2023ರಲ್ಲಿ ರವೀಂದ್ರ ವಿಶ್ವಕಪ್‌ನಲ್ಲಿ 578 ರನ್ ಗಳಿಸಿದ್ದರು. ಇದರಲ್ಲಿ ಮೂರು ಶತಕ ಮತ್ತು ಎರಡು ಅರ್ಧ ಶತಕಗಳು ಸೇರಿದ್ದವು. ಸಹಜವಾಗಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.