ನೀರೆಯ ಅಂದಕ್ಕೆ ಸೀರೆಯೇ ಮೆರಗು…!!ಭಾರತೀಯ ಸಂಸ್ಕೃತಿಯ ಒಂದು ಭಾಗ ಕೂಡ ಸೀರೆ…ಹೀಗಾಗಿ ಭಾರತೀಯ ಮಹಿಳೆಯರ ಪ್ರಮುಖ ಉಡುಗೆಯೇ ಸೀರೆ. ಈಗ ಈ ಸೀರೆಯನ್ನು ಇಡೀ ವಿಶ್ವವೇ ಮೆಚ್ಚು ಅನುಕರಣೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿಯೇ ಈ ಸೀರೆಯ ಬಗ್ಗೆ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ.
ದೀರ್ಘ ಕಾಲ ಸೀರೆ ಉಡುವುದರಿಂದ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.. ಇದರ ಜೊತೆಗೆ ಯಾವುದೇ ಬಟ್ಟೆಯನ್ನು ಸೂಕ್ತ ರೀತಿಯಲ್ಲಿ ಅಂದರೆ ಬಿಗಿಯಾಗಿ ಧರಿಸಿದರೂ ಕ್ಯಾನ್ಸರ್ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಬಹುತೇಕ ಎಲ್ಲಾ ಕಡೆ ಮದುವೆಯಾದ ಮಹಿಳೆಯರು ವರ್ಷವಿಡೀ ಸೀರೆ ಧರಿಸುತ್ತಾರೆ.. ಅದರಲ್ಲೂ ದಕ್ಷಿಣ ಭಾರತದಲ್ಲಿ ಸೀರೆ ಉಡುವ ಮಹಿಳೆಯರ ಸಂಖ್ಯೆಯೇ ಹೆಚ್ಚು.. ಸೀರೆ ಉಡುವವರು, ಲಂಗವನ್ನು ಸೊಂಟದ ಸುತ್ತ ದಾರದಿಂದ ಕಟ್ಟಿರುತ್ತಾರೆ.. ಅದು ಸೊಂಟದ ಮೇಲೆ ಉಜ್ಜಲು ಪ್ರಾರಂಭಿಸುತ್ತದೆ. ಇದರಿಂದಾಗಿ ಆ ಪ್ರದೇಶದಲ್ಲಿ ಚರ್ಮಕ್ಕೆ ಹಾನಿಯಾಗುತ್ತದೆ.. ಬಿಗಿಯಾಗಿ ಯಾವಾಗಲೂ ಒಂದೇ ಸ್ಥಳದಲ್ಲಿ ಕಟ್ಟುವುದರಿಂದ ಆ ಭಾಗದಲ್ಲಿ ಚರ್ಮ ಕಪ್ಪಾಗುತ್ತದೆ.. ಹೀಗೆ ಮುಂದುವರೆಯುವುದರಿಂದ ಅಲ್ಲಿ ಕ್ಯಾನ್ಸರ್ ಕೋಶಗಳು ಹುಟ್ಟಲು ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ..
ಸೀರೆ ಕ್ಯಾನ್ಸರ್ ಗೆ ಉಡುಗೆಗಿಂತ ಸ್ವಚ್ಛತೆ ಕೊರತೆಯೂ ಇದಕ್ಕೆ ಕಾರಣವಂತೆ.. ಹೆಚ್ಚಿನ ಶಾಖ ಮತ್ತು ಆರ್ದ್ರತೆ ಇರುವ ಪ್ರದೇಶಗಳಲ್ಲಿ ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಇದರ ಪ್ರಕರಣಗಳು ವರದಿಯಾಗುತ್ತಿವೆ.. ಭಾರತದಲ್ಲಿ ಮಹಿಳೆಯರಲ್ಲಿ ಕಂಡುಬರುವ ಎಲ್ಲಾ ಕ್ಯಾನ್ಸರ್‌ಗಳಲ್ಲಿ ಸೀರೆ ಕ್ಯಾನ್ಸರ್ ಶೇ. 1ರಷ್ಟಿದೆ.. ವೈದ್ಯಕೀಯ ಭಾಷೆಯಲ್ಲಿ, ಇದನ್ನು ಸ್ಕ್ವಾಮಸ್ ಸೆಲ್ ಕಾರ್ಸಿನೋಮ ಎಂದು ಕರೆಯಲಾಗುತ್ತಿದೆ.
ಮುಂಬೈನ ಆರ್ ಎನ್ ಕೂಪರ್ ಆಸ್ಪತ್ರೆಯಲ್ಲಿ ಈ ಕುರಿತು ಸಂಶೋಧನೆ ನಡೆಸಿದೆ. 68 ವರ್ಷದ ಮಹಿಳೆಯೊಬ್ಬರಿಗೆ ಸೀರೆ ಕ್ಯಾನ್ಸರ್ ಇರುವುದು ಪತ್ತೆಯಾದ ಬಾಂಬೆ ಆಸ್ಪತ್ರೆಯ ವೈದ್ಯರು, ಇದಕ್ಕೆ ಸೀರೆ ಕ್ಯಾನ್ಸರ್ ಎಂಬ ಹೆಸರನ್ನು ನೀಡಿದ್ದಾರೆ. ಈ ಮಹಿಳೆ 13 ವರ್ಷ ವಯಸ್ಸಿನಿಂದಲೂ ಸೀರೆ ಉಡುತ್ತಿದ್ದಳು ಎನ್ನಲಾಗಿದೆ.
ಡಿಎನ್‌ಎಗೆ ನೀಡಿದ ಸಂದರ್ಶನವೊಂದರಲ್ಲಿ ದೆಹಲಿಯ ಪಿಎಸ್ ಆರ್ ಐ ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ವೈದ್ಯರಾದ ಡಾ. ವಿವೇಕ್ ಗುಪ್ತಾ,ಭಾರತದಲ್ಲಿ ವರ್ಷಗಳಿಂದ ಸೀರೆ ಉಡುವ ಮಹಿಳೆಯರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಬಿಗಿಯಾಗಿ ಲಂಗವನ್ನು ಧರಿಸಿರುವಂತಹ ಸೊಂಟದ ಭಾಗದಲ್ಲಿ ಪ್ರಾರಂಭದಲ್ಲಿ ತುರಿಕೆ ಆರಂಭವಾಗಿ, ದಿನಕಳೆದಂತೆ ಸೊಂಟದ ಸುತ್ತಲೂಚರ್ಮದ ಸಿಪ್ಪೆ ಏಳಲು ಆರಂಭವಾಗುತ್ತದೆ. ಈ ರೀತಿಯ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷ್ಯಿಸುತ್ತಾ ಹೋದರೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ತುಂಬಾ ಬಿಗಿಯಾದ ಫಿಟ್ ಜೀನ್ಸ್ ಪುರುಷರಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಕೂಡ ತಜ್ಞರು ಹೇಳಿದ್ದಾರೆ. ಹೀಗಾಗಿ ಇನ್ನು ಮುಂದೆ ಪ್ರತಿಯೊಬ್ಬರೂ ಬಿಗಿಯಾದ ಬಟ್ಟೆ ಧರಿಸುವ ಮುನ್ನ ಎಚ್ಚರಿಕೆ ವಹಿಸುವುದ ಅಗತ್ಯವಾಗಿದೆ. ಇಲ್ಲಾವದರೆ, ಕ್ಯಾನ್ಸರ್ ಆಹ್ವಾನಿಸಿದಂತೆಯೇ ಸರಿ….