ಬಾಲಿವುಡ್ ನಟಿ ನೋರಾ ಫತೇಹಿ ಈಗ ನೆಟ್ಟಿಗರು ಹಾಗೂ ಕಾಮುಕರ ವಿರುದ್ಧ ಕಿಡಿಕಾರಿದ್ದಾರೆ.
ಬಾಲಿವುಡ್ ನಲ್ಲಿ ನೋರಾ ಉತ್ತಮ ಡ್ಯಾನ್ಸಿಂಗ್ ಗೆ ಹೆಸರುವಾಸಿಯಾಗಿದ್ದಾರೆ. ಈಗಾಗಲೇ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗ ನಟಿಯ ಖಾಸಗಿ ಭಾಗದ ಮೇಲೆ ಫೋಕಸ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.
“ಕೆಲವರು ದೇಹದ ಹಿಂಭಾಗ ನೋಡಿಯೇ ಇಲ್ಲ, ಎಂಬಂತೆ ವರ್ತಿಸುತ್ತಾರೆ. ಇದು ನನಗೆ ಮಾತ್ರ ಆದ ನೋವಲ್ಲ; ಹಲವು ನಟಿಯರಿಗೆ ಆಗುತ್ತಿರುವ ನೋವು. ನಟಿಯರ ದೇಹದ ಖಾಸಗಿ ಭಾಗಗಳನ್ನೇ ಗುರಿಯಾಗಿಸಿ, ವಿಡಿಯೋ ಮಾಡಿ ಹರಿಬಿಟ್ಟು ಅನಾವಶ್ಯಕವಾಗಿ ವೈರಲ್ ಮಾಡುತ್ತಾರೆ. ಕೆಲವೊಮ್ಮೆ ಜೂಮ್ ಮಾಡೋಕೆ ಏನೂ ಇರುವುದಿಲ್ಲ; ಆದರೂ, ಅವರು ಏನನ್ನು ಫೋಕಸ್ ಮಾಡುತ್ತಾರೆ ಗೊತ್ತಿಲ್ಲ” ಎಂದು ನೋರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ನಾನು ಸುಂದರವಾದ ದೇಹವನ್ನು ಪಡೆದಿದ್ದೇನೆ. ನನಗೆ ಅದರ ಬಗ್ಗೆ ಹೆಮ್ಮೆ ಇದೆ. ನಾನು ಅದರಲ್ಲಿ ನಾಚಿಕೆ ಪಡುವುದಿಲ್ಲ. ಆದರೆ ಕೆಲವು ಕಾಮುಕರ ಮಿತಿ ಮೀರಿದ ವರ್ತನೆಗಳು ನೋವು ತರುತ್ತಿದೆ” ಎಂದು ಹೇಳಿದ್ದಾರೆ.
ಸದ್ಯ ಈ ನಟಿ 5 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಕನ್ನಡದಲ್ಲಿ ಕೂಡ ಅವರು ಸೊಂಟ ಬಳುಕಿಸಿ ಸೈ ಎನಿಸಿಕೊಂಡಿದ್ದಾರೆ.