ಕಲಬುರಗಿ: ಇದೇ ಜುಲೈ 11 ರಂದು ಕಲಬುರಗಿ ನಗರದ ಸರಾಫ್ ಬಜಾರ್ ನಲ್ಲಿ ಚಿನ್ನದಂಗಡಿ ದರೋಡೆ ಮಾಡಿದ್ದ ಮತ್ತಿಬ್ಬರು ಆರೋಪಿಗಳ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಹಾರಾಷ್ಟ್ರದ ಮುಂಬೈ ಮೂಲದ ಅರ್ಬಜ್ ಶೇಖ್ (22) ಮತ್ತು ಸಾಜೀದ್ ಮಂಡಲ್ (25) ಬಂಧಿತ ಆರೋಪಿಗಳು.
ಮಲ್ಲೀಕ್ ಜ್ಯೂವೆಲರಿ ಮೇಕಿಂಗ್ ಶಾಪ್ ನ ಮಾಲೀಕ ಶಫಕತುಲ್ಲಾ ಹಣೆಗೆ ಗನ್ ಇಟ್ಟು, ಸುಮಾರು 2.865 ಕೆ.ಜಿಯಷ್ಟು ಚಿನ್ನಾಭರಣ ದೋಚಿದ್ದ ಖದೀಮರಲ್ಲಿ, ಕಳೆದ ವಾರ ನಾಲ್ವರನ್ನು ಪೊಲೀಸರು ಬಂಧಿಸಿ 2.10 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದರು.
ಇದೀಗ ಮತ್ತಿಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 1 ಲೈಟರ್ ಗನ್, 1 ಕಬ್ಬಿಣದ ಮಚ್ಚು ಮತ್ತು 35 ಸಾವಿರ ನಗದು ಹಣ ಜಪ್ತಿ ಮಾಡಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.