ಚಿತ್ರದುರ್ಗ: ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಅಣ್ಣ ತಂಗಿ ಇಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ನಡೆದಿದೆ.
ತಳಕು ಗ್ರಾಮದ ಅಭಿ (28), ತಂಗಿ ಮಂಜುಳಾ (25) ಮೃತರು.
ಅಪಘಾತದಲ್ಲಿ ರಾಯಚೂರು ಮೂಲದ ಕಾರು ಚಾಲಕ ನಾಗಿರೆಡ್ಡಿ ಗಾಯಗೊಂಡಿದ್ದು, ಆತನನ್ನು ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.