ಕರಾವಳಿಯ ಬೆಡಗಿ ಪೂಜಾ ಹೆಗ್ಡೆಗೆ ಈಗಿನ ಮಟ್ಟಿಗೆ ಯಶಸ್ಸು ಸಿಗದಿದ್ದರೂ ಅವಕಾಶಗಳಿಗೆ ಮಾತ್ರ ಕಡಿಮೆಯಾಗಿಲ್ಲ.
ಸದ್ಯ ಅವರು, ಅಹಾನ್ ಶೆಟ್ಟಿ ಜೊತೆ ನಟಿಸಲಿರುವ ಪ್ರಾಜೆಕ್ಟ್‌ವೊಂದಿಗೆ ಶಾಹಿದ್ ಕಪೂರ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಐರೆನ್ ಲೆಗ್ ಎಂದು ಕೆಣಕಿ ಮಾತನಾಡುತ್ತಿದ್ದವರಿಗೆ ನಟಿ ಬ್ಯಾಕ್ ಟು ಬ್ಯಾಕ್ ಅವಕಾಶ ಪಡೆಯುತ್ತಿದ್ದಾರೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರ ಅಹಾನ್‌ಗೆ ಪೂಜಾ ನಾಯಕಿ ಎಂದು ಅನೌನ್ಸ್ ಮಾಡಲಾಗಿತ್ತು. ಈ ಬೆನ್ನಲ್ಲೇ ಮತ್ತೊಂದು ಚಿತ್ರದ ಬಗ್ಗೆ ಮಾಹಿತಿ ಸಿಕ್ಕಿದೆ. ಈಗ ಅವರು ಶಾಹಿದ್ ಕಪೂರ್ ನಟನೆಯ ‘ದೇವಾ’ ಸಿನಿಮಾದ ಚಿತ್ರೀಕರಣದಲ್ಲಿ ಪೂಜಾ ಭಾಗಿಯಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಾಹಿದ್ ಕಪೂರ್ ಜೊತೆ ಪೂಜಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೂಜಾ ಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ದೇವಾ ಸಿನಿಮಾ ಕಳೆದ ಅಕ್ಟೋಬರ್‌ನಲ್ಲಿಯೇ ಶುರುವಾಗಿದೆ. ಸದ್ಯ ಮುಂಬೈನಲ್ಲಿ ಸೆಕೆಂಡ್ ಶೆಡ್ಯೂಲ್ ಶೂಟಿಂಗ್ ಭರದಿಂದ ನಡೆಯುತ್ತಿದೆ. ಮಲಯಾಳಂನ ಹೆಸರಾಂತ ನಿರ್ಮಾಪಕ ರೋಶನ್ ಆಂಡ್ರ್ಯೂಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ದೇವಾ ಸಿನಿಮಾ ಇದೇ ಅಕ್ಟೋಬರ್ 11ಕ್ಕೆ ತೆರೆಗೆ ಅಪ್ಪಳಿಸಲಿದೆ.
ಸಲ್ಮಾನ್ ಖಾನ್ ಜೊತೆಗಿನ ‘ಕಿಸಿ ಕಾ ಬಾಯ್ ಕಿಸಿ ಕೀ ಜಾನ್’ ಸಿನಿಮಾದಲ್ಲಿ ಪೂಜಾ ಹೆಗ್ಡೆ ಕೊನೆಯದಾಗಿ ನಟಿಸಿದ್ದರು. ಅದು ಸೋಲು ಕಂಡಿತ್ತು. ಈಗ ಮತ್ತೆ ಪೂಜೂ ತಮ್ಮ ಅದೃಷ್ಟ ಪರೀಕ್ಷೆ ಮುಂದುವರೆಸಿದ್ದಾರೆ.