ಬೆಂಗಳೂರು: ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 22 ಕೆಜಿ ಚಿನ್ನ, 6.5 ಕೋಟಿ ರೂ. ನಗದು ಹಾಗೂ 40 ಕೆಜಿ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ.
ಚುನಾವಣೆ ಸಂದರ್ಭದಲ್ಲಿಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ನಾಯಕರಿಗೆ ಶಾಕ್ ನೀಡುವಂತಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಆಪ್ತರ ಮನೆಗಳ ಮೇಲೆಯೇ ದಾಳಿ ನಡೆದಿದೆ. ನಗರದ ಬಸವನಗುಡಿಯಲ್ಲಿನ ಉದ್ಯಮಿಯೊಬ್ಬರ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ಸೀಕ್ರೆಟ್ ರೂಮ್ ನಲ್ಲಿ 6.5 ಕೋಟಿ ರೂ. ನಗದು ಹಣ, 22 ಕೆಜಿ ಚಿನ್ನ, 40 ಕೆಜಿ ಬೆಳ್ಳಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ವೇಳೆ ಅಪಾರ ಪ್ರಮಾಣದ ಹಣ, ಬೇನಾಮಿ ಆಸ್ತಿ ಪತ್ತೆಯಾಗಿವೆ. ಡಿಕೆ ಸುರೇಶ್ ಆಪ್ತರು ಎನ್ನಲಾದ 6 ಜನರ ನಿವಾಸದ ಮೇಲೆಯೇ ಅಧಿಕಾರಿಗಳು ದಾಳಿ ನಡೆಸಿದ್ದರು. ಕೋಣನಕುಂಟೆಯ ಶ್ರೀಧರ್, ಅಂಜನಾಪುರ ಮಾಜಿ ಕಾರ್ಪೋರೇಟರ್ ಗಂಗಾಧರ್ ಸೇರಿದಂತೆ 6 ಜನರ ನಿವಾಸದ ಮೇಲೆ ದಾಳಿ ನಡೆದಿದೆ.