ಜಗತ್ತಿನಲ್ಲಿ ಆಗಾಗ ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ, ಇಲ್ಲೊಂದು ಮಗುವಿಗೆ ದೇಹ ಹಾಗೂ ಮುಖದ ತುಂಬಾ ದಟ್ಟವಾಗಿ ಕೂದಲು ಬೆಳೆದಿದೆ. ಇದಕ್ಕೆ ತಾಯಿ ಅಚ್ಚರಿಯ ಕಾರಣವನ್ನೂ ನೀಡಿದ್ದಾರೆ.
ಫಿಲಿಪ್ಪೀನ್ಸ್ ನಲ್ಲಿ ಈ ಘಟನೆ ನಡೆದಿದೆ. ಗರ್ಭಾವಸ್ಥೆಯಲ್ಲಿ ಕಾಡು ಬೆಕ್ಕಿನ ಮಾಂಸ ತಿಂದಿದ್ದೆ. ಹೀಗಾಗಿ ನನ್ನ ಮಗ ಈ ಪರಿಸ್ಥಿತಿಗೆ ಬಂದಿದ್ದಾನೆ ಎಂದು ತಾಯಿ ಹೇಳಿದ್ದಾರೆ. ಜರೆನ್ ಎಂಬ ಎರಡು ವರ್ಷದ ಬಾಲಕನ ಮುಖದ ತುಂಬೆಲ್ಲ ದಟ್ಟವಾದ ಕೂದಲುಗಳು ಬೆಳೆದಿವೆ. ವೆರ್ವುಲ್ಫ್ ಸಿಂಡ್ರೋಮ್ ಸಮಸ್ಯೆಯಿಂದ ಬಾಲಕ ಬಳಲುತ್ತಿದ್ದಾನೆ. ಹೀಗಾಗಿ ದಟ್ಟವಾದ ಕೂದಲು ಬೆಳೆದಿವೆ. ಮಗನ ಈ ಸ್ಥಿತಿಗೆ ಗರ್ಭಿಣಿಯಾಗಿದ್ದಾಗ ನಾನು ಕಾಡು ಬೆಕ್ಕಿನ ಮಾಂಸ ತಿಂದಿದ್ದು ಕಾರಣ ಎಂದು ಜರೆನ್ ನ ತಾಯಿ ಅಲ್ಮಾ ಗಮೊಂಗನ್ ತಿಳಿಸಿದ್ದಾರೆ.
ಕಾಡು ಬೆಕ್ಕಿನ ಮಾಂಸ ತಿಂದಿದ್ದಕ್ಕೆ ನನ್ನ ಮಗನಿಗೆ ಶಾಪ ತಟ್ಟಿದೆ. ಹೀಗಾಗಿ ಮೈ ತುಂಬಾ ಕೂದಲು ಬೆಳೆದಿದೆ ಎಂದು ತಾಯಿ ಹೇಳಿದ್ದಾರೆ.
ಆದರೆ, ವೈದ್ಯರು ಮಾತ್ರ ವೆರ್ ವುಲ್ಫ್ ಅಥವಾ ಹೈಪರ್ಟೀಕೋಸಿಕ್ ಕಾಯಿಲೆಯಿಂದ ಮಗು ಈ ರೀತಿ ಬೆಳೆಯುತ್ತಿದೆ. ತಾಯಿಯ ಹೇಳಿಕೆಗೂ ಇದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ತಾಯಿಯ ಹೇಳಿಕೆಯೂ ಸತ್ಯ ಇರಬಹುದಲ್ಲವಾ ಅಂತ ಹಲವು ಚರ್ಚಿಸುತ್ತಿದ್ದಾರೆ.