ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಂಚನೆಯ ಜಾಲವನ್ನು ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೈಫ್ ಇನ್ಶೂರೆನ್ಸ್ ಕಂಪನಿಗಳ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದು ಲಕ್ಷಾಂತರ ರೂ. ವಂಚಿಸಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾ ಮೂಲದ ಮನವೀರ್ ಸಿಂಗ್ ಬಂಧಿತ ಆರೋಪಿ ಎನ್ನಲಾಗಿದೆ. ಬಂಧಿತ ಆರೋಪಿ ಆನ್ ಲೈನ್ ನಲ್ಲಿ ಪ್ರತಿಷ್ಠಿತ ಇನ್ಶೂರೆನ್ಸ್ ಕಂಪನಿಗಳ ನಕಲಿ ವೆಬ್ ಸೈಟ್ ರಚಿಸಿ ಬಿಡುತ್ತಿದ್ದ. ಇದನ್ನು ಸರ್ಚ್ ಮಾಡಿದ ಜನರು ಇನ್ಶೂರೆನ್ಸ್ ಮಾಡಿಸಲು ಮುಂದಾಗುತ್ತಿದ್ದರು.
ಆನ್‌ಲೈನ್ ಮೂಲಕವೇ ಸಾರ್ವಜನಿಕರು ಆರೋಪಿಯನ್ನ ಸಂಪರ್ಕಿಸುತ್ತಿದ್ದರು. ನಂತರ ಹುಡುಗನನ್ನ ಕಳುಹಿಸಿ ಡಾಕ್ಯುಮೆಂಟ್ಗಳಾದ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪೋಟೊಸ್, ಚೆಕ್ ಪಡೆಯುತ್ತಿದ್ದ.
ಆನಂತರ ನಕಲಿ ಪಾಲಿಸಿ ಬಾಂಡ್ ಕಳುಹಿಸಿ, ಪ್ರತಿ ತಿಂಗಳು ಇನ್ಸೂರೆನ್ಸ್ ಅಮೌಂಟ್ ತಾನೇ ಖಾತೆಗೆ ಹಾಕಿಕೊಳ್ಳುತ್ತಿದ್ದ. ಈ ರೀತಿ ಬೆಂಗಳೂರಿನ ಹಲವರಿಗೆ ವಂಚಿಸಿದ್ದಾನೆ ಎನ್ನಲಾಗಿದೆ. ಸದ್ಯ ಈತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 4.5 ಕೋಟಿ ವಂಚನೆ ಬೆಳಕಿಗೆ ಬಂದಿದೆ. ಜೊತೆಗೆ ಆರೋಪಿಯ ಆರು ಬ್ಯಾಂಕ್ ಖಾತೆ ಪ್ರೀಜ್ ಮಾಡಿದ ಪೊಲೀಸರು, 15 ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.