ಜನವರಿ ಇಪ್ಪತ್ತೆರಡರ ಅಮೃತ ಘಳಿಗೆಯಲ್ಲಿ ಶ್ರೀರಾಮರ ಬಾಲ ವಿಗ್ರಹ ಪ್ರತಿಷ್ಠಾಪನೆಯಾಗಿ ವಿಶ್ವದಾದ್ಯಂತ ಸುದ್ದಿಯಾಗಿತ್ತು. ಹಿಂದೂ ಬಾಂಧವರಿಗೆ ಅದು ನಿಜಕ್ಕೂ ಅಮೃತ ಘಳಿಗೆ. ಅವಿರತ ಹೋರಾಟದ ಫಲವಾಗಿ ಅಯೋಧ್ಯಯಲ್ಲಿ ಕೊನೆಗೂ ಅಂದು ಬಾಲ ರಾಮ ಪ್ರತಿಷ್ಠಾಪನೆಗೊಂಡು ಪ್ರತಿ ಹಿಂದೂಗಳ ಹೃದಯದಲ್ಲಿ ಪ್ರಭು ಶ್ರೀರಾಮ ನೆಲೆಯಾದ ದಿನವದು. ವಿಶೇಷವಾಗಿ ನಮ್ಮ ಮೈಸೂರರಿನ ಶಿಲ್ಪಿ ‘ಅರುಣ್ ಯೋಗಿರಾಜ್’ ಮೂಲಕ ಬಾಲರಾಮರ ಕೆತ್ತನೆಯಾಗಿದ್ದು, ಕರ್ನಾಟಕದ ಪಾಲಿಗೆ ಬಲು ವಿಶೇಷವೇ ಆಗಿಹೋಯ್ತು. ನಮ್ಮ ನಾಡಿನ ಕಲ್ಲು, ನಮ್ಮ ನಾಡಿನ ಶಿಲ್ಪಿಯೇ ಕೆತ್ತಿದ ಶ್ರೀರಾಮ ಅಯೋಧ್ಯೆಯಲ್ಲಿ ವಿರಾಜಮಾನರಾದದ್ದು, ನಿಜಕ್ಕೂ ಕನ್ನಡಿಗರ ಪಾಲಿಗೆ ಅವಿಸ್ಮರಣೀಯವಾಯ್ತು. ಸದ್ಯ ಈ ಖುಷಿಯ ಜೊತೆ ಇನ್ನೊಂದು ‘ವಿಶೇಷ ವಿಷ್ಣು ವಿಗ್ರಹ’ ನಮ್ಮ ಕರ್ನಾಟಕದಲ್ಲೇ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ಹೌದು! ರಾಯಚೂರು ಜಿಲ್ಲೆಯ ದೇವಸಗೂರು ಎಂಬ ಹಳ್ಳಿಯಲ್ಲಿ ಹಾದುಹೋಗುವ ಕೃಷ್ಣಾ ನದಿಯಲ್ಲಿ, ಪ್ರಾಚೀನ ಕಾಲದ ವಿಷ್ಣು ಮತ್ತು ಶಿವ ರೂಪಿ ಕಲ್ಲಿನ ವಿಗ್ರಹಗಳು ದೊರೆತಿವೆ. ಸಿಕ್ಕ ಆ ವಿಗ್ರಹಗಳಲ್ಲಿ, ವಿಷ್ಣು ವಿಗ್ರಹವು, ‘ನಮ್ಮ ಅಯೋಧ್ಯೆ ಬಾಲ ರಾಮ’ರ ವಿಗ್ರಹವನ್ನೇ ಹೆಚ್ಚಾಗಿ ಹೋಲುತ್ತಿದ್ದು ಕಂಡವರನ್ನ ನಿಬ್ಬೆರಗಾಗಿಸುತ್ತಿದೆ.
ಅಯೋಧ್ಯೆಯಲ್ಲಿ ಮಂದಸ್ಮಿತರಾಗಿ ಕಂಗೊಳಿಸುತ್ತಿರುವ, ಬಾಲ ರಾಮರ ಮೂರ್ತಿಯಂತೆಯೇ ಹೆಚ್ಚೂ-ಕಮ್ಮಿ ಹೋಲುತ್ತಿರುವ ಆ ಕಲ್ಲಿನ ವಿಷ್ಣು ವಿಗ್ರಹವು ಸಾವಿರ ವರ್ಷಗಳಿಗೂ ಹಿಂದಿನದ್ದು’ ಎನ್ನಲಾಗುತ್ತಿದೆ. ಅಸಲಿಗೆ ಅಷ್ಟು ಹಳೆಯ ವಿಗ್ರಹಕ್ಕೂ, ಇತ್ತೀಚೆಗೆ ‘ನಮ್ಮ ಶಿಲ್ಪಿ ಅರುಣ್ ಯೋಗಿರಾಜ್’ ಕೆತ್ತಿರುವ ವಿಗ್ರಹಕ್ಕೂ ಹೋಲಿಕೆ ಕಂಡು ಬಂದಿದ್ದು, ಬಲು ವಿಶೇಷವಾಗಿ ಪರಿಣಮಿಸಿದೆ.
ಎನೇ ಇರಲಿ. ಕರ್ನಾಟಕದ ಹೆಮ್ಮೆಯ ಕಲೆಗೆ ಕೇಂದ್ರದಲ್ಲಿ ಮನ್ನಣೆ ದೊರೆತು,ಷಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿದ ಬಾಲರಾಮ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಂಡು ನಿಂತದ್ದು ಎಲ್ಲವೂ ಈಗ ವಿಶ್ವ ವಿಖ್ಯಾತ. ಇದೀಗ ‘ರಾಯಚೂರಿನಲ್ಲಿ ಸಿಕ್ಕ ಪ್ರಾಚೀನ ವಿಷ್ಣು ವಿಗ್ರಹ’, ಅಯೋಧ್ಯೆಯ ಬಾಲ ರಾಮಗೆ ಹೊಲಿಕೆಯಾಗುತ್ತಿರುವುದು, ಇದು ಮುಂದೆ ಬೇರೆ ಇನ್ಯಾವ ಅಚ್ಚರಿಯತ್ತ ಕೊಂಡಯ್ಯಲಿದೆಯೋ ಕಾದುನೋಡಬೇಕಿದೆ.
