ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕ ಅಪ್ರಾಪ್ತ ಹುಡುಗಿಯನ್ನು ಪುಸಲಾಯಿಸಿ ಕರೆತಂದಿದ್ದ ಎನ್ನಲಾಗಿ ಸ್ಥಳಕ್ಕೆ ದೌಡಾಯಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಹುಬ್ಬಳ್ಳಿಯ ಗಬ್ಬೂರಿನ ಹೋಟೇಲ್ ಒಂದರಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ವಿಚಾರಿಸಿದಾಗ ಮತ್ತೊಂದು ಲವ್ ಜೀಹಾದ್ ತೆರನಾದ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಯ ನೆಪದಲ್ಲಿ ಪುಸಲಾಯಿಸಿ ಕರೆತಂದಿದ್ದ ಎಲನ್ನಲಾದ ಅಪ್ರಾಪ್ತ ಹಿಂದೂ ಹುಡುಗಿಯು, ಬಾಗಲಕೋಟ ಜಿಲ್ಲೆಯ ಮುಧೋಳದವಳು ಎಂದು ಗೊತ್ತಾಗುತ್ತಿದ್ದಂತಯೇ (ಮುಧೋಳದಲ್ಲಿ ಅಪ್ರಾಪ್ತಳ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು) ಅಲರ್ಟ್ ಆದ ಹಿಂದೂಗಳು, ಆ ಮುಸಲ್ಮಾನ ಹುಡುಗನನ್ನು ಹಿಡಿದು-ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ಬೇಂಡಗೇರಿ ಪೊಲೀಸ್ ಠಾಣೆಗೆ ಎಳೆದೊಯ್ದು ಒಪ್ಪಿಸಿದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು, ಮುಖಂಡರು ಜೈ ಶ್ರೀರಾಮ್ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. “ಹಿಂದೂ ಹೆಣ್ಣು ಮಕ್ಕಳೇ ಇನ್ನಾದರೂ ಎಚ್ಚೆತ್ತುಕೊಳ್ಳಿ, ಪ್ರೀತಿ,ಪ್ರೇಮದ ಹೆಸರಲ್ಲಿ ಹಾಳಾಗದಿರಿ” ಎಂದು ಎಚ್ಚರಿಕೆ ನೀಡಿದರು.
ಒಟ್ಟಿನಲ್ಲಿ ಇದೇ ಹುಬ್ಬಳ್ಳಿಯ ಹುಡುಗಿ ನೇಹಾ ಹಿರೇಮಠ್ ಅಮಾನುಷವಾಗಿ ಕೊಲೆಯಾಗಿ, ಕೇಸು ನಡೆಯುತ್ತಿರುವಾಗಲೇ ಈ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸ್ವಲ್ಪ ಆಳಕ್ಕಿಳಿದು ಯೋಚಿಸಬೇಕಾದ ಅಗತ್ಯವಿದ್ದಂತಿದೆ!.