ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿ ಮೂರು ವರ್ಷಗಳೇ ಕಳೆದಿವೆ. ಈಗ ಅವರ ನೆನಪಿನಲ್ಲಿಯೇ ಪತ್ನಿ ಅಶ್ವಿನಿ ಜೀವನ ಸಾಗಿಸುತ್ತಿದ್ದು, ಅವರ ಹುಟ್ಟು ಹುಬ್ಬದ ದಿನ ಭಾವುಕರಾಗಿ ಮಾತನಾಡಿದ್ದಾರೆ.
ಅಪ್ಪು ಎಂದೆಂದಿಗೂ ನಮ್ಮ ಹೃದಯದಲ್ಲಿ ಶಾಶ್ವತ ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶುಭಹಾರೈಸಿದ್ದಾರೆ. ಅಪ್ಪು ತಮ್ಮ ಅಪ್ರತಿಮ ಪ್ರತಿಭೆ, ಕರುಣೆ ಮತ್ತು ಮಾನವೀಯತೆಯಿಂದ ನಮ್ಮ ಹೃದಯಾಂತರಾಳವನ್ನು ಬೆಳಗಿಸುತ್ತಲೇ ಇದ್ದಾರೆ. ಅಪ್ಪು ಅವರು ಮಾನವೀಯತೆಯಲ್ಲಿ ಇರಿಸಿದ್ದ ಅಚಲ ಬದ್ಧತೆ ಅವರ ಹಾದಿಯಲ್ಲಿ ನಡೆಯಲು ನಮಗೆ ಸದಾ ಸ್ಫೂರ್ತಿದಾಯಕವಾಗಿರುತ್ತದೆ ಎಂದು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪೋಸ್ಟ್ ಮಾಡಿದ್ದಾರೆ.
ಪುನೀತ್ ನಂತರ ಪತ್ನಿ ಕುಟುಂಬ ನಿರ್ವಹಣೆ ಸೇರಿದಂತೆ ಅವರ ವ್ಯವಹಾರವನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ. ಆರ್‌ಕೆ ಸಂಸ್ಥೆ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.