ರಾಯಚೂರು: ಯುವರಾಜ್ ಕುಮಾರ್ ನಟನೆಯ ಎಕ್ಕ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದ್ದು,ಇದೀಗ ನಟ ಯುವ ರಾಜ್‌ಕುಮಾರ್ ಟೆಂಪಲ್ ರನ್ ಶುರು ಮಾಡಿದ್ದಾರೆ.
ಮಂತ್ರಾಲಯದ ರಾಯರ ದರ್ಶನದ ಪಡೆದ ನಂತರ ಹನುಮಾನ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ರಾಯಚೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯುವರಾಜ್ ಕುಮಾರ್, ನಾವು ಹೊಸ ಕೆಲಸ ಶುರು ಮಾಡುವುದಕ್ಕೂ ಮುನ್ನ ಮಂತ್ರಾಲಯ ರಾಯರ ದರ್ಶನ ಮಾಡುತ್ತೇವೆ. ಎಕ್ಕ ಸಿನಿಮಾ ಶುರುವಾಗುವ ಮುನ್ನ ಕೂಡ ಮಂತ್ರಾಲಯದಲ್ಲಿ ಪೂಜೆ ಮಾಡಿಸಲಾಗಿತ್ತು. ರಾಯರೇ ನಮಗೆ ದೊಡ್ಡ ಧೈರ್ಯ ಎಂದರು.



















