ಬೀದರ್: ಪೊಲೀಸರ ಕಿರುಕುಳಕ್ಕೆ ಮನನೊಂದ ಯೂಟ್ಯೂಬರ್ ಒಬ್ಬ ಫೇಸ್ ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ನಗರದಲ್ಲಿ ನಡೆದಿದೆ.
ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ಯುವಕ. ಬೀದರ್ ನಗರದ ಎಸ್‌ಪಿ ಪ್ರದೀಪ್ ಗುಂಡಿ ವಿರುದ್ಧ ಕಿರುಕುಳ ಆರೋಪ ಮಾಡಲಾಗಿದೆ.
ಯೂಟ್ಯೂಬರ್ ಸಲ್ಮಾನ್ ಖಾನ್ ಪೇಸ್ ಬುಕ್‌ನಲ್ಲಿ ಲೈವ್ ವಿಡಿಯೋ ಮಾಡಿ, ಇದಕ್ಕೆಲ್ಲಾ ಕಾರಣ ಎಸ್‌ಪಿ ಪ್ರದೀಪ್ ಗುಂಟಿ ಎಂದು ಹೇಳಿದ್ದಾನೆ. ಬಳಿಕ ನನ್ನ ಮನೆಯವರನ್ನು ನೋಡಿಕೊಳ್ಳಿ ಎಂದು ಕಣ್ಣೀರು ಹಾಕುತ್ತ, 12 ಮಾತ್ರೆಗಳನ್ನ ನುಂಗಿದ್ದಾನೆ. ಸದ್ಯ ಯುವಕನಿಗೆ ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕ!



















