ಭಾರತೀಯರ ಪಾಲಿಗೆ ನಿಜಕ್ಕೂ ಯೂಟ್ಯೂಬ್ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿ ಪರಿಣಮಿಸಿದೆ.
ಹೌದು! ದೇಶದಲ್ಲೀಗ ಯೂಟ್ಯೂಬ್ ದೊಡ್ಡ ಮಟ್ಟದಲ್ಲಿ ಸ್ವಯಂ ಉದ್ಯೋಗ ಸೃಷ್ಟಿಸಿರುವುದಲ್ಲದೇ, ಸ್ವತಂತ್ರ ಹಾಗೂ ಆರ್ಥಿಕ ಬಲ ನೀಡಿರುವುದು ಸಾಬೀತಾಗಿದೆ. ಯೂಟ್ಯೂಬ್ ಸಿಇಒ ನೀಲ್ ಮೋಹನ್ ತಮ್ಮ ಸಂಸ್ಥೆಯಿಂದ ಅದೆಷ್ಟೋ ಜನರ ಜೀವನಕ್ಕೆ ಆಧಾರವಾಗಿದೆ ಎಂದಿದ್ದಾರೆ.
ಭಾರತದಲ್ಲಿ ಕಳೆದ 3 ವರ್ಷದಲ್ಲಿ ಯೂಟ್ಯೂಬ್ ತನ್ನ ಕಂಟೆಟ್ ಹೋಲ್ಡರ್ ಗಳಿಗೆ 21 ಸಾವಿರ ಕೋಟಿ ರೂ. ಸಂದಾಯ ಮಾಡಿದೆ. ಅಚ್ಚರಿಯಾದರೂ ಇದು ಸತ್ಯ. ಭಾರತದ ಕ್ರಿಯೇಟರ್ಸ್, ಕಲಾವಿದರು ಹಾಗೂ ಮಾಧ್ಯಮ ಕಂಪನಿಗಳಿಗೆ ಕಳೆದ 3 ವರ್ಷದಲ್ಲಿ ಯೂಟ್ಯೂಬ್ 21 ಸಾವಿರ ಕೋಟಿ ರೂ. ಪೇಮೆಂಟ್ ಮಾಡಿದೆ.
ಅಷ್ಟೇ ಅಲ್ಲಾ ಮುಂದಿನ 2 ವರ್ಷಗಳಲ್ಲಿ ಖುದ್ದು ಯೂಟ್ಯೂಬ್ ಭಾರತದಲ್ಲಿ 850 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಕಳೆದೊಂದು ವರ್ಷದಲ್ಲಿ ಯೂಟ್ಯೂಬ್ ಗೆ 100 ಮಿಲಿಯನ್ ಚಾನಲ್ ಗಳು ಕಂಟೆಂಟ್ ಅಪ್ಲೋಡ್ ಮಾಡಿವೆ. ಈ ಪೈಕಿ ಕಳೆದೊಂದು ವರ್ಷದಲ್ಲೇ 15 ಸಾವಿರ ಚಾನಲ್ ಗಳು ಆರಂಭಗೊಂಡಿದ್ದು, ಅವುಗಳ ಸಬ್ ಸ್ಕ್ರೈಬರ್ ಗಳ ಸಂಖ್ಯೆ 10 ಲಕ್ಷ ದಾಟಿದೆ.