ಬೆಂಗಳೂರು: ಇದೇನಿದ್ದರೂ ಕಂಟೆಂಟ್ ಕ್ರಿಯೇಟರ್ ಗಳ ಜಮಾನ. ಅಡುಗೆ ಮಾಡುವುದರಿಂದ ಹಿಡಿದು, ಆಟೋಮೊಬೈಲ್ ವರೆಗೆ ನೂರಾರು ಕ್ಷೇತ್ರಗಳಿಗೆ ಸಂಬಂಧಿಸಿದ ಕಂಟೆಂಟ್ ಕ್ರಿಯೇಟರ್ ಗಳಿದ್ದಾರೆ. ಯುಟ್ಯೂಬ್ ಮೂಲಕವಂತೂ ಕೋಟ್ಯಂತರ ರೂಪಾಯಿ ಗಳಿಸುತ್ತಾರೆ. ಆದರೆ, ಜುಲೈ 15ರಿಂದ ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ ಗಳಿಗೆ ಹೊಸ ನಿಯಮಗಳು ಅನ್ವಯವಾಗಲಿವೆ. ಈ ಗೈಡ್ ಲೈನ್ಸ್ ಪಾಲಿಸಿದರೆ ಮಾತ್ರ ಅವರಿಗೆ ಹಣ ಸಿಗುತ್ತದೆ.
ಯುಟ್ಯೂಬ್ ಹೊಸ ನಿಯಮಗಳು ಹೀಗಿವೆ
- ಕಾಪಿ ಮಾಡಿದ ಕಂಟೆಂಟ್ ಇರುವ ವೀಡಿಯೋಗಳನ್ನು ಅಪ್ ಲೋಡ್ ಮಾಡುವಂತಿಲ್ಲ
- ಒಂದೇ ವಿಷಯ ಅಥವಾ ಪುನರಾವರ್ತಿತ ವೀಡಿಯೋಗಳನ್ನು ಪರಿಗಣಿಸುವುದಿಲ್ಲ
- ವೀಡಿಯೋಗೆ ಬಳಸುವ ಧ್ವನಿಯೂ ಸ್ವಂತದ್ದಾಗಿರಬೇಕು, ಎಐ ಅಥವಾ ರೋಬೋಟಿಕ್ ವಾಯ್ಸ್ ಬಳಸುವಂತಿಲ್ಲ
- ಉಪಯುಕ್ತ ಮಾಹಿತಿಯ ಕೊರತೆ ಇದ್ದರೂ ಅಂತಹ ವೀಡಿಯೋಗಳು ಮಾನಿಟೈಸ್ ಆಗುವುದಿಲ್ಲ
ಇದಕ್ಕೂ ಮೊದಲು ಯುಟ್ಯೂಬ್ ಮೂಲಕ ಹಣ ಗಳಿಸಲು, ಒಂದು ವರ್ಷದೊಳಗೆ ಯಾವುದೇ ಖಾತೆಯು ಕನಿಷ್ಠ 1,000 ಚಂದಾದಾರರನ್ನು ಮತ್ತು 4,000 ವೀಕ್ಷಣಾ ಗಂಟೆಗಳನ್ನು ಹೊಂದಿರಬೇಕಿತ್ತು. ಶಾರ್ಟ್ಸ್ ವೀಡಿಯೋಗಳನ್ನು ಪೋಸ್ಟ್ ಮಾಡುವ ಕ್ರಿಯೇಟರ್ ಗಳನ್ನು 90 ದಿನಗಳಲ್ಲಿ 10 ದಶಲಕ್ಷ ವ್ಯೂಸ್ ಗಳನ್ನು ಪಡೆಯಬೇಕಿತ್ತು. ಇದಾದ ಬಳಿಕವೇ ವೀಡಿಯೋಗಳು ಮಾನಿಟೈಸ್ ಆಗುತ್ತಿದ್ದವು. ಈಗ ಹೊಸ ನಿಯಮಗಳನ್ನೂ ಜಾರಿಗೊಳಿಸಿದ್ದು, ಕಂಟೆಂಟ್ ಕ್ರಿಯೇಟರ್ ಗಳಿಗೆ ಸವಾಲಾಗಲಿದೆ.
ಹೊಸ ನಿಯಮಗಳ ಪ್ರಕಾರ, ಇನ್ನುಮುಂದೆ ಯುಟ್ಯೂಬರ್ ಗಳು ಹೊಸ ಹೊಸ ವಿಷಯಗಳಿಗೆ ಆದ್ಯತೆ ನೀಡುವ ಜತೆಗೆ ಸ್ವಂತಿಕೆಗೆ ಪ್ರಾಮುಖ್ಯತೆ ನೀಡಬೇಕು. ಕಂಟೆಂಟ್ ನಿಂದ ಜನರಿಗೆ ಮಾಹಿತಿ ಲಭಿಸುವಂತಿರಬೇಕು. ಇದರ ಜತೆಗೆ ಕ್ರಿಯೇಟಿವಿಟಿಯನ್ನೂ ಮೆಂಟೇನ್ ಮಾಡಬೇಕು.