ಬೆಂಗಳೂರು : ಗುಟ್ಕಾ, ಪಾನ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಇದರ ಬಳಕೆಯ ಪ್ರಮಾಣ ಹೆಚ್ಚುತ್ತಿದೆ. ರಾಜ್ಯಾದ್ಯಂತ ಇದರ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದರೂ ಟಿವಿ, ಸೋಷಿಯಲ್ ಮೀಡಿಯಾ, ವಾಹನಗಳು ಸೇರಿದಂತೆ ಇದರ ಜಾಹೀರಾತುಗಳು ರಾರಾಜಿಸುತ್ತಿವೆ.
ಅದಲ್ಲದೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳ ಮೇಲೆ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಅಂಟಿಸಲಾಗಿದ್ದು, ಯುವಕರ ಗುಂಪೊಂದು ಇದರ ವಿರುದ್ದ ಪ್ರತಿಭಟನೆ ನಡೆಸಿದೆ. ಇಂತಹ ಪರೋಕ್ಷ ಜಾಹೀರಾತುಗಳ ವಿರುದ್ಧ ರಾಜ್ಯದ ಯುವಜನತೆ ರೊಚ್ಚಿಗೆದ್ದಿದ್ದಾರೆ.
ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಂದ ಗುಟ್ಕಾ ಮತ್ತು ತಂಬಾಕು ಜಾಹೀರಾತುಗಳನ್ನು ಯುವಕರು ಕಿತ್ತೆಸೆಯುತ್ತಿರುವ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಸಾರ್ವಜನಿಕರು ಬಳಸುವ ವಾಹನದಲ್ಲಿ ಇಂತಹ ಅಪಾಯಕಾರಿ ಜಾಹೀರಾತುಗಳನ್ನು ಬಳಸುವುದು ತಪ್ಪು, ಆರೋಗ್ಯಕ್ಕೆ ತೊಂದರೆ ಉಂಟುಮಾಡುವ ಆಹಾರ ಪದಾರ್ಥಗಳನ್ನು ಪ್ರಚಾರ ಮಾಡುವುದನ್ನು ವಿರೋಧಿಸಿ ಯುವಕರು, ಸ್ವತಃ ಈ ನಿರ್ಧಾರ ಕೈಗೊಂಡಿದ್ದಾರೆ. ಬೆಂಗಳೂರಿನಲ್ಲಿ ಆರಂಭವಾದ ಈ ಅಭಿಯಾನವು ಮುಧೋಳ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಸದ್ಯ ಯುವಕರ ಈ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ‘ಅಕ್ಷರ ಯೋಗಿ’ ಅಂಕೇಗೌಡರಿಗೆ ಒಲಿದ ಪದ್ಮಶ್ರೀ ಗೌರವ!



















