ಬೆಂಗಳೂರು : ವಿವೇಕನಗರ ಪೊಲೀಸರ ಹಲ್ಲೆಯಿಂದ ಯುವಕ ಸಾವನ್ನಪ್ಪಿರುವ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಯುವಕನ ತಾಯಿ ಆಗ್ರಹಿಸುತ್ತಿದ್ದಾರೆ.
22 ವರ್ಷದ ದರ್ಶನ್ ಸಾವನ್ನಪ್ಪಿರುವ ಯುವಕ. ಕುಡಿತದ ಚಟ ಇದ್ದ ಕಾರಣ ಎರಡು ದಿನ ದರ್ಶನ್ನನ್ನು ವಿವೇಕನಗರ ಪೊಲೀಸರು ಠಾಣೆಯಲ್ಲೇ ಇಟ್ಟುಕೊಂಡಿದ್ದರು. ಮಗನನ್ನು ಬಿಡಲು ಠಾಣೆಗೆ ಹೋಗಿ ದರ್ಶನ್ ತಾಯಿ ಕೇಳಿದರು ಬಿಟ್ಟಿರಲಿಲ್ಲ.
ಬಳಿಕ ಆತನನ್ನ ಯುನಿಟಿ ರಿಯಾಬ್ ಸೆಂಟರ್ ಗೆ ದಾಖಲಿಸಲಾಗಿತ್ತು. ದರ್ಶನ್ ತಾಯಿ ರಿಯಾಬ್ ಗೆ ಕರೆ ಮಾಡಿದರು ಮಗ ಚೆನ್ನಾಗಿದ್ದಾನೆ ಎಂದು ಹೇಳುತ್ತಿದ್ದರು. ಆದರೆ ಮಗನ ಜೊತೆ ಮಾತನಾಡಲು ಅವಕಾಶ ಕೊಟ್ಟಿರಲಿಲ್ಲ. ನ. 26ರಂದು ಬೆಳಗ್ಗೆ ಕರೆಮಾಡಿದ್ದ ರಿಯಾಬ್ ನವರು ಮಗ ಸಾವನ್ನಪ್ಪಿದ್ದಾನೆ ಎಂದಿದ್ದರು. ರಿಯಾಬ್ ಗೆ ಹೋದಾಗ ಆತನನ್ನು ನೆಲಮಂಗಲ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದರು. ಇದರ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ.
ರಿಯಾಬ್ ಸೆಂಟರ್ ಸಿಬ್ಬಂದಿಗಳು ದರ್ಶನ್ ಮತ್ತು ಆತನ ಪೋಷಕರಿಗೆ ಉಸಿರಾಟ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ. ಆದರೆ ದರ್ಶನ್ ದೇಹ ನೋಡಿದಾಗ ಗಾಯದ ಗುರುತು ಪತ್ತೆ. ಹೀಗಾಗಿ ಮಗನ ಸಾವಿನಲ್ಲಿ ಅನುಮಾನ ಇದೆ ಎಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೋಲಿಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದರಲ್ಲಿ ಹಲ್ಲೆಗೈದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ : ಮಂಗಳೂರಿಗೆ ಬಂದಿಳಿದ ಪ್ರಧಾನಿಗೆ ಹೂ ಮಳೆಯ ಸ್ವಾಗತ | ರೋಡ್ ಶೋ ಆರಂಭ..!



















