ಚಿಕ್ಕಬಳ್ಳಾಪುರ: ವಿದ್ಯುತ್ ಲೈನ್ ಸರಿಪಡಿಸುವ ವೇಳೆ ಕಾಲೇಜು ವಿದ್ಯಾರ್ಥಿ ಸಾವನಪ್ಪಿರುವ ಘಟನೆ ಗೌರಿಬಿದನೂರು ತಾಲೂಕಿನ ಕಾಟನಕಲ್ಲು ಗ್ರಾಮದಲ್ಲಿ ನಡೆದಿದೆ.
ನಾಮಗೊಂಡ್ಲ ಗ್ರಾಮದ ಅಭಿಲಾಷ್ (21) ಮೃತ ಯುವಕ. ಅಭಿಲಾಷ್ ಕುಟುಂಬಕ್ಕೆ ಮುಖ್ಯ ಆಸರೆಯಾಗಿದ್ದ. ನಗರದಲ್ಲಿ ಬಿಕಾಂ ವ್ಯಾಸಾಂಗ ಮಾಡುತ್ತಿದ್ದ.
ರಜಾ ದಿನಗಳಲ್ಲಿ ಬೆಸ್ಕಾಂ ಗುತ್ತಿಗೆದಾರ ಸೀತಾರಾಮ್ ಜೊತೆ ಕೆಲಸಕ್ಕೆ ಹೋಗುತ್ತಿದ್ದ. ಎಂದಿನಂತೆ ಇಂದೂ ಸಹ ಕೆಲಸಕ್ಕೆಂದು ತೆರಳಿದ್ದ, ಕಾಟನಕಲ್ಲು ವಿದ್ಯುತ್ ಲೈನ್ ಎಳೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಗೌರಿಬಿದನೂರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ, ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.