ಚಿಕ್ಕಮಗಳೂರು: ಮದ್ಯ (Alchol)ದ ವಿಷಯವಾಗಿ ಬಾರ್ ಗೆ ನುಗ್ಗಿದ್ದ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ (Congress) ಅಧ್ಯಕ್ಷ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕೊಪ್ಪ (Koppa) ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಎಂಬಾತನಿಂದ ಈ ಕೃತ್ಯ ನಡೆದಿದೆ. ಈತ ಶ್ರೀಗಂಧ ಬಾರ್ಗೆ ಬಂದು ಎಣ್ಣೆ ಕೇಳಿದ್ದಾನೆ. ಕ್ಯಾಶಿಯರ್ ಎಣ್ಣೆ ಕೊಡಲು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಭಾನುವಾರ (ಮಾ.16) ಬೆಳಗ್ಗೆ ತನ್ನ ಪಟಾಲಂ ಜೊತೆ ಬಂದು ಕ್ಯಾಶಿಯರ್ ವಿಜಯಾನಂದ್ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶ್ರೀಗಂಧ ಬಾರ್ ಕಾಂಗ್ರೆಸ್ ಮುಖಂಡ ಸುರೇಶ್ ಎಂಬುವವರಿಗೆ ಸೇರಿದೆ. ಆದರೆ, ಇದುವರೆಗೂ ಈ ಕುರಿತು ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.