ಬೆಂಗಳೂರು: ಯೂತ್ ಕಾಂಗ್ರೆಸ್ (congress)ಚುನಾವಣಾ ಮಾಹಿತಿ ಸೋರಿಕೆಯಾಗಿದ್ದು, ಕಾಂಗ್ರೆಸ್ ಪಾಳಯದಲ್ಲಿ ಸಂಚಲನ ಮೂಡಿಸಿದೆ.
ಭವಿಷ್ಯದ ನಾಯಕತ್ವ ಸೃಷ್ಟಿಸುವುದಕ್ಕಾಗಿ ಕಾಂಗ್ರೆಸ್ ಚುನಾವಣೆ(election) ನಡೆಸುತ್ತಿದೆ. ಹೊಸ ಸದಸ್ಯತ್ವ ಮಾಡಿಸುವ ಮೂಲಕ ಮತದಾನ(VOTE) ಮಾಡಲು ಅವಕಾಶ ಎಐಸಿಸಿ(AICC) ಅವಕಾಶ ಕಲ್ಪಿಸಿತ್ತು. ಈಗಾಗಲೇ ಸದಸ್ಯತ್ವ ಹಾಗೂ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ.
ಸದಸ್ಯತ್ವ ನೋಂದಣಿ ಪರಿಶೀಲನೆಯ ಹಂತದಲ್ಲಿಯೇ ನೋಂದಣಿಯ ಮಾಹಿತಿ ಸೋರಿಕೆಯಾಗಿದೆ. ಸೋರಿಕೆಯಾದ ಮಾಹಿತಿಯಿಂದಲೇ ಕೈ ನಾಯಕರಿಗೆ ಶಾಕ್ ಆಗಿದೆ.
ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಘಟಾನುಘಟಿ ನಾಯಕರ ಕ್ಷೇತ್ರದಲ್ಲಿ ಕಳಪೆ ಸಾಧನೆಯಾಗಿದೆ. ಎಐಸಿಸಿ ಅಧ್ಯಕ್ಷ, ಸಿಎಂ, ಹೋಮ್ ಮಿನಿಸ್ಟರ್ ಸೇರಿದಂತೆ ಘಟಾನುಘಟಿ ನಾಯಕ ಕ್ಷೇತ್ರದಲ್ಲಿ ಕಳಪೆ ಸಾಧನೆಯಾಗಿದೆ.
ಯಾವ್ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ನೋಂದಣಿ..?
- ಒಟ್ಟು ನೋಂದಣಿಯಾದ ಸದಸ್ಯತ್ವ ಸಂಖ್ಯೆ -24,09,767
- ಅನುಮೋದನೆಯಾದ ಸದಸ್ಯತ್ವ ಸಂಖ್ಯೆ – 10,64,903
- ತಿರಸ್ಕೃತಗೊಂಡ ಸದಸ್ಯತ್ವ ಸಂಖ್ಯೆ – 7,05,172
- ತಡೆ ಹಿಡಿದಿರುವ ಸದಸ್ಯತ್ವ ಸಂಖ್ಯೆ – 5,36,372
ಘಟಾನುಘಟಿ ನಾಯಕರ ಕ್ಷೇತ್ರದಲ್ಲೇ ಕಳಪೆ ಸಾಧನೆ! - ಸಿಎಂ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರ – 1095 ಮತಗಳು
- ಗೃಹ ಸಚಿವ ಪರಮೇಶ್ವರ್ ಅವರ ಕೊರಟಗೆರೆ ಕ್ಷೇತ್ರ – 102 ಮತಗಳು
- ಸಚಿವ ರಾಜಣ್ಣ, ಮಧುಗಿರಿ ಕ್ಷೇತ್ರ – 1623 ಮತಗಳು
- ಸಚಿವ ಚೆಲುವರಾಯಸ್ವಾಮಿ, ನಾಗಮಂಗಲ ಕ್ಷೇತ್ರ – 173 ಮತಗಳು
- ಸಚಿವ ಪ್ರಿಯಾಂಕ್ ಖರ್ಗೆ, ಚಿತ್ತಾಪುರ ಕ್ಷೇತ್ರ – 475 ಮತಗಳು
- ಸಚಿವ ಎಂಬಿ ಪಾಟೀಲ್, ಬಬಲೇಶ್ವರ ಕ್ಷೇತ್ರ – 986 ಮತಗಳು
- ಸಚಿವ ಕೆ ವೆಂಕಟೇಶ್, ಪಿರಿಯಾಪಟ್ಟಣ – 191 ಮತಗಳು
- ಸಚಿವ ಸತೀಶ್ ಜಾರಕಿಹೊಳಿ ಅವರ ಯಮಕನಮರಡಿ ಕ್ಷೇತ್ರ – 10,617 ಮತಗಳು
- ಡಿಸಿಎಂ ಡಿಕೆ ಶಿವಕುಮಾರ್ ಅವರ ಕನಕಪುರ ಕ್ಷೇತ್ರ – 10,034 ಮತಗಳು
- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿ ಅತ್ಯಂತ ಕಡಿಮೆ ನೋಂದಣಿ ಆಗಿದೆ – 3,234
- ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ನೋಂದಣಿ – 86,957 ಆಗಿದೆ.