ಬೆಂಗಳೂರು: ಯುವತಿ ಮೇಲೆ ನಡುರಸ್ತೆಯಲ್ಲೇ ರ್ಯಾಪಿಡೋ (Rapido) ಬೈಕ್ ಚಾಲಕನೋರ್ವ(Bike Rider) ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಕುರಿತು ವಿಡಿಯೋವೊಂದು (Viral Video) ವೈರಲ್ ಆಗಿದೆ. ಬೈಕ್ ಚಾಲಕ ಸುಹಾಸ್ ಹಲ್ಲೆ ಮಾಡಿರುವ ವ್ಯಕ್ತಿ. ಅವಾಚ್ಯ ಶಬ್ಧಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದು ಆ ಯುವತಿ, ಶಾರ್ಟ್ ಕಟ್ ನಲ್ಲಿ ಬಂದಿದ್ದೇನೆಂದು ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್ನಲ್ಲಿ ಬೈದರು. ದಾರಿ ಗೊತ್ತು ಅಂದರೂ ಬೈದರು. ಟಿಫಿನ್ ಬಾಕ್ಸ್ ನಲ್ಲಿ ಹೊಡೆದರು ಎಂದು ಆರೋಪಿಸಿದ್ದಾನೆ.
ಅಷ್ಟು ಜನರ ಮುಂದೆ ಹೊಡೆದಿದ್ದರಿಂದ ನಾನೂ ಸಿಟ್ಟಿನಲ್ಲಿ ಹೊಡೆದೆ. ಆಮೇಲೆ ನಾನು ಅವರು ಕೆಲಸ ಮಾಡುವ ಸ್ಟೋರ್ಗೆ ಹೋದೆ. ಆಗ ಅಲ್ಲಿನ ಮ್ಯಾನೇಜರ್, ಅವಳು ಸೈಕೋ ಎಲ್ಲೆಡೆ ಹುಚ್ಚುಚ್ಚಾಗಿ ಆಡ್ತಾಳೆ ಅಂದ್ರು. ಸದ್ಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ಕರೆ ಮಾಡಿದ್ದಾರೆ. ನಾನು ತನಿಖೆಗೆ ಸಹಕಿಸುತ್ತೇನೆ ಎಂದಿದ್ದಾನೆ.