ಕೊಪ್ಪಳ: ಯುವಕರು ಮದ್ಯದ ಅಮಲಿನಲ್ಲಿ ಹಳಿಯ ಮಲಗಿದ್ದ ವೇಳೆ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೆಚ್ಚು ಮದ್ಯ ಕುಡಿದ ಪರಿಣಾಮ ಯುವಕರು ಹಳಿಯ(Train) ಮೇಲೆಯೇ ಮಲಗಿದ್ದಾರೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಈ ಘಟನೆ ಕೊಪ್ಪಳದ (Koppal) ಗಂಗಾವತಿ (Gangavati) ನಗರದಲ್ಲಿ ನಡೆದಿದೆ. ಗಂಗಾವತಿಯ ಹಿರೇಜಂತಕಲ್ ನ ಸುನೀಲ್ (23), ವೆಂಕಟ ಭೀಮನಾಯ್ಕ (20) ಹಾಗೂ ಇಲಾಯಿ ಕಾಲೋನಿಯ ಮೌನೇಶ್ ಪತ್ತಾರ (23) ಸಾವನ್ನಪ್ಪಿದ ದುರ್ದೈವಿಗಳು.
ಗುರುವಾರ ರಾತ್ರಿವೇಳೆ ಮೂವರು ಯುವಕರು ರೈಲ್ವೆ ಹಳಿ ಮೇಲೆಯೇ ಮದ್ಯ ಸೇವಿಸಿ ಅಮಲಿನಲ್ಲಿಯೇ ಹಳಿ ಮೇಲೆಯೇ ಮಲಗಿದ್ದಾರೆ. ಇದೇ ವೇಳೆ ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುವ ರೈಲು ಯುವಕರ ಮೇಲೆ ಹರಿದು ಹೋಗಿದೆ. ಪರಿಣಾಮ ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಕುರಿತು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















