ಬೆಳಗಾವಿ : ಅನಾಮಧೇಯ ವ್ಯಕ್ತಿಗಳ ತಂಡವೊಂದು ತಲ್ವಾರ್‌ನಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಂಕೇಶ್ವರ ನಿವಾಸಿ ದತ್ತಾತ್ರೆಯ ತೊರ್ವತ ಹಲ್ಲೆಗೊಳಗಾದ ಯುವಕ.
ಅಪರಿಚಿತ ಗುಂಪೊಂದು ಯುವಕನ ಕೈ ಹಾಗೂ ಕುತ್ತಿಗೆಯ ಭಾಗಕ್ಕೆ ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದೆ. ಸದ್ಯ ಯುವಕನನ್ನು ಮಹಾರಾಷ್ಟ್ರದ ಗಡಹಿಂಗ್ಲಜ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಲ್ಲೆಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಆದರೆ, ಹಲ್ಲೆಕೋರರು ಗುಂಪು ಇತ್ತು ಎಂದು ಪೋಲಿಸರಿಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತಿದ್ದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಸಂಕೇಶ್ವರ ಪಟ್ಟಣದಲ್ಲಿ ಪೋಲಿಸರು ಬೀಡು ಬಿಟ್ಟಿದ್ದು, ಹಲ್ಲೆ ಮಾಡಿದ ಗ್ಯಾಂಗ್‌ನ ಶೋಧ ಕಾರ್ಯದಲ್ಲಿದ್ದಾರೆ.
ಇದನ್ನೂ ಓದಿ : AI ಶೃಂಗದಲ್ಲಿ ‘ಅರೆಬೆತ್ತಲೆ’ ಪ್ರತಿಭಟನೆ | ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಅರೆಸ್ಟ್



















