ಬೆಂಗಳೂರು : ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಯಲಹಂಕ ನ್ಯೂಟೌನ್‌ನಲ್ಲಿ ನಡೆದಿದೆ.
23 ವರ್ಷದ ಅಭಿಷೇಕ್ ಆತ್ಮಹತ್ಯೆಗೆ ಶರಣಾದ ಯುವಕ. ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವತಿ ಪ್ರೀತಿ ನಿರಾಕರಿಸಿದ್ದಕ್ಕೆ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಯುವಕ ಡೆತ್‌ನೋಟ್‌ನಲ್ಲಿ ನನ್ನ ಜೊತೆ ಇದ್ದವಳು, ಅವಳಿಗೀಗ ಏನಾಯಿತೆಂದು ನನಗೆ ತಿಳಿಯುತ್ತಿಲ್ಲ. ನನ್ನ ಜೀವನ ಪ್ರೀತಿಯಿಂದಲೇ ತುಂಬಿ ತುಳುಕುತ್ತಿತ್ತು. ಈಗ ಆ ಪ್ರೀತಿಯೇ ಅಂತ್ಯವಾಗಿದೆ. ಆದ್ದರಿಂದ ನಾನು ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ. ಎಲ್ಲರಿಗೂ ಹೇಳುತ್ತಿದ್ದೇನೆ ದಯವಿಟ್ಟು ಯಾರನ್ನೂ ಪ್ರೀತಿಸಬೇಡಿ. ಈಗಿನ ಕಾಲದಲ್ಲಿ ಎಲ್ಲರೂ ವಂಚಕರೇ. ನನ್ನ ಎಲ್ಲಾ ಸ್ನೇಹಿತರಿಗೆ ಗುಡ್ ಬೈ. ಆ ಪ್ರೀತಿಯ ಕಾರಣದಿಂದ ನಿಮಗೆಲ್ಲರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ಎಲ್ಲರೂ ನನ್ನನ್ನು ಪ್ರೀತಿಸುವುದರ ಜೊತೆಗೆ ನನ್ನೊಂದಿಗೆ ಸಂತೋಷವಾಗಿದ್ದರು. ಆದರೆ ನಾನು ನಿಮಗ್ಯಾರಿಗೂ ಸಮಯ ನೀಡಲು ಸಾಧ್ಯವಾಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಬರೆದುಕೊಂಡಿದ್ದಾನೆ. ಸದ್ಯ ಈ ಘಟನಾ ಸಂಬಂಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ : ಅಲ್ಪಸಂಖ್ಯಾತರ ಮನಸ್ಥಿತಿ ಮುಂದುವರಿದರೆ ಕಾಂಗ್ರೆಸ್‌ಗೆ ಉಳಿಗಾಲವೇ ಇಲ್ಲ : ವಿ. ಸೋಮಣ್ಣ



















