ದಾವಣಗೆರೆ : ಪಾರ್ಕ್ ನಲ್ಲಿ ಯುವಕ ಮತ್ತು ಯುವತಿ ಹೊಡೆದಾಡಿಕೊಂಡ ಘಟನೆ ದಾವಣಗೆರೆ ಎಂಸಿಸಿಬಿ ಬ್ಲಾಕ್ ನ ವಾಟರ್ ಟ್ಯಾಂಕ್ ಪಾರ್ಕ್ ನಲ್ಲಿ ನಡೆದಿದೆ.
ಹರಪನಹಳ್ಳಿ ಮೂಲದ ಯುವತಿಯ ಚಿನ್ನವನ್ನು ಹುಬ್ಬಳ್ಳಿ ಮೂಲದ ಯುವಕ ಅಡವಿಟ್ಟು ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ. ಚಿನ್ನ ಅಡವಿಟ್ಟ ಹಣ ವಾಪಸ್ ಕೊಟ್ಟಿರುವುದಾಗಿ ಯುವಕ ಹೇಳಿದ್ದಾನೆ.ಆದರೆ ಯುವತಿ ನನಗೆ ಹಣ ನೀಡಿಲ್ಲ ಎಂದು ಚಿನ್ನ ಬಿಡಿಸಿ ಕೊಡುವಂತೆ ಇಬ್ಬರ ಮಧ್ಯ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ.
ಹೊಡೆದಾಡಿಕೊಂಡ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಯಾಗಿದೆ. ಗಲಾಟೆಯ ಬಗ್ಗೆ ಇದುವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.