ಹಾವೇರಿ: ಹುಟ್ಟು ಹಬ್ಬದ ದಿನವೇ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ನಡೆದಿರುವ ಘಟನೆ ನಡೆದಿದೆ.
ಈ ಘಟನೆ ಹಾವೇರಿ (Haveri) ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ನಿವಾಸಿ ಮನೋಜ್ ಪ್ರಕಾಶ್ ಉಡಗಣ (28) ಹತ್ಯೆಯಾದ ಯುವಕ. ದುಷ್ಕರ್ಮಿಗಳು ಮದ್ಯ ಕುಡಿಸಿ ವರದಾ ನದಿ ಬ್ರಿಡ್ಜ್ ಮೇಲಿಂದ ಆರೋಪಿಗಳನ್ನು ನೂಕಿ ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಮನೋಜ್ ಮದುವೆಯಾಗಿದ್ದ ಗೃಹಿಣಿಗೆ ಮೆಸೇಜ್ ಮಾಡುತ್ತಿದ್ದರಿಂದ ಹತ್ಯೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಮನೋಜ್, ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆಕೆಗೆ ಬೇರೊಬ್ಬರ ಜೊತೆ ಮದುವೆಯಿತ್ತು. ಆದರೂ ಮನೋಜ್ ಆಕೆಗೆ ಮೆಸೇಜ್ ಮಾಡುತ್ತಿದ್ದ. ಇದು ಮಹಿಳೆಯ ಪತಿಗೆ ಗೊತ್ತಾಗಿ, ಹತ್ಯೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.



















