ಚಿಕ್ಕಬಳ್ಳಾಪುರ : ಸಚಿವ ಎಂ.ಸಿ ಸುಧಾಕರ್ ಚಿಲ್ಲರೆ ರಾಜಕೀಯ ಮಾಡುವುದನ್ನು ಬಿಡಬೇಕು. ಆತನನ್ನು ಏನೋ ಅಂದುಕೊಂಡಿದ್ದೆ. ಆದರೇ, ಇಷ್ಟು ಚಿಲ್ಲರೆ ಮನುಷ್ಯ ಎಂದು ಭಾವಿಸಿರಲಿಲ್ಲ ಎಂದು ಚಿಕ್ಕಬಳ್ಳಾಪರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ ಸುಧಾಕರ್ ಹೇಳಿದ್ದಾರೆ.
ಚಿಲ್ಲರೆ ರಾಜಕೀಯ ಬಿಟ್ಟು ನಿನ್ನ ತಂದೆಯಂತೆ ರಾಜಕೀಯ ಮಾಡು ಎಂದು ಎಂ.ಸಿ ಸುಧಾಕರ್ ಅವರನ್ನು ಏಕವಚನದಲ್ಲೇ ನಿಂದಿಸಿದ್ದಾರೆ. ಡಿ.ಸಿ ಕಚೇರಿಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ದೆಹಲಿಯದಲ್ಲಿದ್ದ ನಾನು ರಾಜೀನಾಮೆ ನೀಡಬೇಕೆಂದು ಸಚಿವ ಎಂ.ಸಿ ಸುಧಾಕರ್ ಹೇಳುತ್ತಾನೆ. ಇದು ಯಾವ ನ್ಯಾಯ ? ನೀನು ಮೊದಲು ರಾಜೀನಾಮೆ ನೀಡು. ನಿನ್ನ ಕಚೇರಿ ಪಕ್ಕದಲ್ಲೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೀನೆ ರಾಜೀನಾಮೆ ನೀಡು ಎಂದು ಸಚಿವ ಎಂ.ಸಿ ಸುಧಾಕರ್ ಅವರನ್ನು ತೆಲುಗಿನಲ್ಲಿ ಸಂಸದ ಸುಧಾಕರ್ ಅವರು ಅಣಕಿಸಿದ್ದಾರೆ. ಚೇಳೂರು ತಾಲೂಕು ಕಚೇರಿ ಹೋರಾಟದ ವೇಳೆ ತೆಲುಗಿನಲ್ಲಿ ಸಂಸದ ಸುಧಾಕರ್ ಮಾತನಾಡುವ ವೇಳೆ ಎಂ. ಸಿ ಸುಧಾಕರ್ ಅವರನ್ನು ಏಕವಚನದಲ್ಲಿ ಟೀಕಿಸಿದ್ದಾರೆ.