ಬೆಂಗಳೂರು: ಮದುವೆ, ಮನೆ ಖರೀದಿ, ಅನಾರೋಗ್ಯ… ಹೀಗೆ ಹಲವು ಸಂದರ್ಭಗಳಲ್ಲಿ ಸಾಲದ ಅವಶ್ಯಕತೆ ಇರುತ್ತದೆ. ಆದರೆ, ಈಗ ಬ್ಯಾಂಕ್ ಗಳಲ್ಲಿ ವೈಯಕ್ತಿಕ ಸಾಲ ಪಡೆಯಬೇಕು ಎಂದರೆ ಹೆಚ್ಚು ಬಡ್ಡಿ ವಿಧಿಸಲಾಗುತ್ತದೆ. ನೀವು ಕೆಲಸಕ್ಕೆ ಸೇರಿ ಏಳೆಂಟು ವರ್ಷಗಳಾಗಿದ್ದರೆ, ಪಿಎಫ್ ನಿಂದಲೇ ಕಡಿಮೆ ಬಡ್ಡಿಗೆ ಸಾಲವನ್ನು ಪಡೆಯಬಹುದಾಗಿದೆ. ಬಳಿಕ ಮಾಸಿಕ ಇಎಂಐ ಮೂಲಕ ಸಾಲವನ್ನು ತೀರಿಸಬಹುದಾಗಿದೆ.
ಸಾಲ ಎಷ್ಟು ಸಿಗುತ್ತೆ?
ಇಪಿಎಫ್ಒ ನಿಯಮಗಳ ಪ್ರಕಾರ, ಯಾವುದೇ ಉದ್ಯೋಗಿಯು ಇಪಿಎಫ್ಒ ಸದಸ್ಯನಾಗಿ ಏಳು ವರ್ಷ ಪೂರೈಸಿದ್ದರೆ, ಆತನ ಬೇಸಿಕ್ ಸಂಬಳದ 36 ಪಟ್ಟು ಅಥವಾ ಆತನ ಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತದ ಶೇ.50ರಷ್ಟು ಹಣವನ್ನು ಸಾಲವಾಗಿ ಪಡೆಯಬಹುದಾಗಿದೆ. ಸಾಲದ ಬಡ್ಡಿ, ಇಎಂಐ ಅವಧಿಯನ್ನು ಸಾಲ ಪಡೆಯುವ ಮೊತ್ತದ ಮೇಲೆ ಇಪಿಎಫ್ಒ ನಿಗದಿಪಡಿಸುತ್ತದೆ.
ಪಿಎಫ್ ಸಾಲಕ್ಕೆ ಹೀಗೆ ಅರ್ಜಿ ಸಲ್ಲಿಸಿ
- ಮೊದಲು ನೀವು ಇಪಿಎಫ್ಒ ಅಧಿಕೃತ ವೆಬ್‌ಸೈಟ್ https://www.epfindia.gov.in/ಗೆ ಭೇಟಿ ನೀಡಿ
- UAN, ಪಾಸ್ ವರ್ಡ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ಲಾಗಿನ್ ಮಾಡಿ.
- ನೀವು ಆನ್‌ಲೈನ್ ಸೇವೆಯಲ್ಲಿ ಪಿಎಫ್ ಮೊತ್ತದ ಸಾಲವನ್ನು ಆಯ್ಕೆ ಮಾಡಬೇಕು.
- ಅಲ್ಲಿ ಕಾರಣ ಮತ್ತು ಮೊತ್ತವನ್ನು ಭರ್ತಿ ಮಾಡಿ, ನಿಮ್ಮ ಮೊಬೈಲ್ ಗೆ ಬಂದ OTP ಅನ್ನು ನಮೂದಿಸಿ ಮತ್ತು ಅರ್ಜಿ ಸಲ್ಲಿಸಿ
- ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಹಣವು 7 ರಿಂದ 10 ದಿನಗಳಲ್ಲಿ ನಿಮ್ಮ ಖಾತೆಗೆ ಜಮೆ ಆಗುತ್ತದೆ.
ಕೆಲವು ಮಾನದಂಡಗಳೂ ಇವೆ
- ವ್ಯಕ್ತಿಯು ಯುಎಎನ್ (ಯೂನಿವರ್ಸಲ್ ಅಕೌಂಟ್ ನಂಬರ್) ಹೊಂದಿರಬೇಕು.
- ಸಾಲ ಪಡೆಯುವವರು EPFO ಸದಸ್ಯರಾಗಿರಬೇಕು. ಸದಸ್ಯರಾಗಿ 7 ವರ್ಷ ಆಗಿರಬೇಕು
- ಸಾಲ ಪಡೆಯಲು ನಿಖರ ಕಾರಣವನ್ನು ತಿಳಿಸಬೇಕು.