ಬೆಂಗಳೂರು : ಕೇಂದ್ರದ ಜಿಎಸ್‌ಟಿ ಇಳಿಕೆ ವಿಚಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾವು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಹೇಳಿದ್ದೆವು. ಸರಳೀಕರಣ ಮಾಡುತ್ತೇವೆಂದು ಬಂದಿದ್ದಾರೆ. ಎಷ್ಟರ ಮಟ್ಟಿಗೆ ಆರ್ಥಿಕ ಸುಧಾರಣೆ ಮಾಡುತ್ತಾರೆ ನೋಡಬೇಕು. ಪೆನ್ಸಿಲ್ ಮೇಲೆ,ಚಪಾತಿ,ಮೊಸರಿನ ಮೇಲೆ ಟ್ಯಾಕ್ಸ್ ಹಾಕಿದ್ದರು. ಈಗ ಜ್ಙಾನೋದಯ ಆಗಿದೆ. ಶ್ರೀಮಂತರನ್ನು ಬಿಟ್ಟಿದ್ದಾರೆ. ಬಡವರು,ಸಾಮಾನ್ಯರ ಮೇಲೆ ಇನ್ನೂ ಲೋಪವಿದೆ. ಅದೆಲ್ಲವೂ ಸರಿಯಾಗಬೇಕು. ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ. ಅದನ್ನ ಹೇಗೆ ಸರಿಮಾಡುತ್ತಾರೆ ನೋಡಬೇಕು ಎಂದು ಖರ್ಗೆ ಹೇಳಿದ್ದಾರೆ.
ಇದೇ ವೇಳೇ ಧರ್ಮಸ್ಥಳ ಪ್ರಕರಣವನ್ನು ಎನ್‌ಐಎ ಗೆ ನೀಡಬೇಕು ಎಂಬ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಯಿಸಿದ ಪ್ರಿಯಾಂಕ್, ಅವರು(ಬಿಜೆಪಿ) ಯಾವ ತನಿಖೆಗೆ ಬೇಕಾದರೂ ಕೊಡಲಿ. ಎನ್‌ಐಎ ತನಿಖೆ ಮಾಡಲಿ. ಮಹೇಶ್ ತಿಮರೋಡಿ ಯಾರು ? ಅವರು ಯಾರ ಶಿಷ್ಯ ? ಯಾರ ಗರಡಿಯಲ್ಲಿ ಬೆಳೆದವರು ? ಮಟ್ಟಣ್ಣ ಯುವ ಬಿಜೆಪಿ ಮುಖಂಡ. ನೀವೇ ಮಗು ಚಿವುಟೋದು. ನೀವೇ ತೊಟ್ಟಿಲು ತೂಗುವುದೂ ನೀವೆ. ಬಿಜೆಪಿ ಧರ್ಮಸ್ಥಳ ಚಲೋ ಯಾಕೆ ಮಾಡಿದ್ದಾರೆ. ಅದಕ್ಕೂ ಮೊದಲು ಸೌಜನ್ಯ ಮನೆಗೆ ಬಿಜೆಪಿ ಅವರು ಹೋದರು. ಬಿಜೆಪಿ ನಾಯಕರ ಮೇಲೆ ದೂರು ಕೊಟ್ಟರು. ಇದರಲ್ಲಿ ಅವರ ನಿಲುವು ಏನು ಹೇಳಲಿ..? ನಾವು ಸತ್ಯದ ಪರವಾಗಿ ಇದ್ದೇವೆ. ನಮ್ಮ ಜವಾಬ್ದಾರಿ ಏನಿದೆ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.