ಬೆಂಗಳೂರು: ನಾನೂ ಕೋಟ್ಯಂತರ ರೂಪಾಯಿ ಗಳಿಸಬೇಕು, ಕೋಟ್ಯಧೀಶ ಎನಿಸಿಕೊಳ್ಳಬೇಕು ಎಂಬ ಕನಸು ತುಂಬ ಜನರಿಗೆ ಇರುತ್ತದೆ. ಆದರೆ, ಬರುವ ಸಂಬಳ, ಮಾಡುವ ಉಳಿತಾಯ ಚಿಕ್ಕದಿರುವ ಕಾರಣ ಕೋಟಿ ಕನಸು ನನಸಾಗುವುದೇ ಇಲ್ಲ. ಆದರೆ, ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ ನಿಯಮಿತವಾಗಿ ಹೂಡಿಕೆ ಮಾಡಿದರೆ ಯಾರು ಬೇಕಾದರೂ ಕೋಟಿ ರೂ. ಗಳಿಸಬಹುದು. ಅದರಲ್ಲೂ, ಈಗ ನೀವು 30 ವರ್ಷದವರಾಗಿದ್ದು, 45ನೇ ವಯಸ್ಸಿಗೆ ಕೋಟ್ಯಧೀಶ ಎನಿಸಿಕೊಳ್ಳಬೇಕಾ? ಹಾಗಾದರೆ, ನಿಮಗೊಂದು ಎಸ್ಐಪಿ ಪ್ಲಾನ್ ಇಲ್ಲಿದೆ.
ನೀವು 15 ವರ್ಷಗಳಲ್ಲಿಯೇ ಕೋಟ್ಯಧೀಶರಾಗಬೇಕು ಎಂದು ಬಯಸಿದರೆ, ನೀವು 15-15-15 ಎಂಬ ಹಣಕಾಸು ನಿಯಮವನ್ನು ಪಾಲಿಸಬೇಕು. ಅಂದರೆ, ನೀವು ಪ್ರತಿ ತಿಂಗಳು 15 ಸಾವಿರ ರೂ. ಎಸ್ಐಪಿಯನ್ನು 15 ವರ್ಷಗಳವರೆಗೆ ಕಟ್ಟಿದರೆ, ಶೇ.15ರ ರಿಟರ್ನ್ಸ್ ಲೆಕ್ಕಾಚಾರದಲ್ಲಿ ನೀವು ಒಂದು ಕೋಟಿ ರೂಪಾಯಿ ಗಳಿಸಬಹುದು ಎಂಬುದು ಹಣಕಾಸು ತಜ್ಞರ ಸಲಹೆಯಾಗಿದೆ.
ದೇಶದ ಈಕ್ವಿಟಿ ಮಾರುಕಟ್ಟೆಯಗಳು ವರ್ಷಕ್ಕೆ ಶೇ.15-16ರಷ್ಟು ರಿಟರ್ನ್ಸ್ ನೀಡಿರುವ ಉದಾಹರಣೆಗಳು ಇವೆ. ಮಿಡ್ ಕ್ಯಾಪ್, ಫ್ಲೆಕ್ಸಿ ಕ್ಯಾಪ್ ಹಾಗೂ ಲಾರ್ಜ್ ಕ್ಯಾಪ್ ಫಂಡ್ ಗಳು ಹೆಚ್ಚಿನ ರಿಟರ್ನ್ಸ್ ನೀಡುತ್ತವೆ. ಇದೇ ಲೆಕ್ಕಾಚಾರದಲ್ಲಿ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ಶೇ.15ರಷ್ಟು ರಿಟರ್ನ್ಸ್ ಲೆಕ್ಕಾಚಾರ ಹಾಕಿದರೆ ಖಂಡಿತವಾಗಿಯೂ ಒಂದು ಕೋಟಿ ರೂ. ಗಳಿಸಬಹುದು ಎನ್ನುತ್ತಾರೆ ತಜ್ಞರು.
ನೀವು ಪ್ರತಿ ತಿಂಗಳು 15 ಸಾವಿರ ರೂಪಾಯಿ ಅಂದರೆ, ವರ್ಷಕ್ಕೆ 1.8 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ. 15 ವರ್ಷಗಳಲ್ಲಿ ನೀವು ಹೂಡಿಕೆ ಮಾಡುವ ಮೊತ್ತವು 27 ಲಕ್ಷ ರೂಪಾಯಿ ಆಗುತ್ತದೆ. ಇದಕ್ಕೆ ಶೇ.15ರಷ್ಟು ಅಂದಾಜು ರಿಟರ್ನ್ಸ್ ಎಂದರೂ 1 ಕೋಟಿ ರೂಪಾಯಿ ಹಣ ಗಳಿಸಬಹುದು ಎಂಬುದು ತಜ್ಞರ ಲೆಕ್ಕಾಚಾರವಾಗಿದೆ.
ಗಮನಿಸಿ: ಮ್ಯೂಚುವಲ್ ಫಂಡ್ ಹೂಡಿಕೆಯ ರಿಟರ್ನ್ಸ್ ಮಾರುಕಟ್ಟೆಯ ಏರಿಳಿತವನ್ನು ಆಧರಿಸಿರುತ್ತದೆ. ಅಂದರೆ, ಈ ಮಾದರಿಯ ಹೂಡಿಕೆಯು ರಿಸ್ಕ್ ನಿಂದ ಕೂಡಿರುತ್ತದೆ. ನಾವು ಮಾಹಿತಿ ನೀಡುವ ದೃಷ್ಟಿಯಿಂದ ಲೇಖನ ಪ್ರಕಟಿಸಿದ್ದೇವೆಯೇ ಹೊರತು, ಹೂಡಿಕೆಯ ಶಿಫಾರಸು ಅಲ್ಲ. ಯಾವುದೇ ಮಾದರಿಯ ಹೂಡಿಕೆಗೂ ಮೊದಲು ತಜ್ಞರನ್ನು ಸಂಪರ್ಕಿಸುವುದು ಅತ್ಯವಶ್ಯಕ.
ಇದನ್ನೂ ಓದಿ: NO SIM, NO CHAT : ವಾಟ್ಸ್‌ಆ್ಯಪ್, ಟೆಲಿಗ್ರಾಮ್‌ಗೆ ಕೇಂದ್ರದ ಹೊಸ ‘ಡಿಜಿಟಲ್ ಲಾಕ್’!



















