ಯಡಿಯೂರಪ್ಪ ಒಂದೇ ಒಂದು ಸಮುದಾಯಕ್ಕೆ ಸೇರಿಲ್ಲ. ಎಲ್ಲಾ ಸಮುದಾಯಕ್ಕೆ ಸೇರಿದವರು. ಹೀಗಾಗಿಯೇ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿದ್ದಾರೆ. ಜಾತಿ ಹೆಸರಿನ್ನು ಮುಂದಿಟ್ಟುಕೊಂಡು ಹೋದವರು ಕೇವಲ ಶಾಸಕರಾಗಿ, ಮಾಜಿ ಸಚಿವರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಿಕಾರಿಪುರ ಕ್ಷೇತ್ರದ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಲಿಂಗಾಯತ ಸಮುದಾಯದವರು ಎಂದು ಹೆಸರು ಹೇಳಿಕೊಮನಡು ಪ್ರತ್ಯೇಕ ಸಭೆಗಳನ್ನು ಮಾಡಬಾರದು. ಯಾರೇ ಆಗಲೀ ಸಮುದಾಯ ಹೆಸರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ರೆ, ಅವರು ಬೆಳೆಯುವುದಿಲ್ಲ. ಯಡಿಯೂರಪ್ಪ ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿಯೇ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳು ಆಗಿದ್ದಾರೆ. ಅವರು ಕೇವಲ ಒಂದೇ ಒಂದು ಸಮುದಾಯಕ್ಕೆ ಸೇರಿದವರಲ್ಲ. ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋದವರು. ನೀವು ಜಾತಿ, ಸಮುದಾಯ ಅಂತ ಹೋದ್ರೆ, ಮಾಜಿ ಸಚಿವರುಗಳು, ಶಾಸಕರುಗಳು ಮಾತ್ರ ಆಗುತ್ತೀರಿ ಎಂದು ಟಕ್ಕರ್ ಕೊಟ್ಟಿದ್ದಾರೆ.