ಬೆಂಗಳೂರು: ಯುಗಾದಿ ಹಬ್ಬಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಆದರೆ, ಇದು ಸಿಹಿ ಸುದ್ದಿಯಲ್ಲ, ಬೇವಿನಂತೆ ಕಹಿ ಸುದ್ದಿ. ಏ. 1ರಿಂದ ಸಿಲಿಕಾನ್ ಸಿಟಿ ಮಂದಿಗೆ ಮತ್ತೊಂದು ತೆರಿಗೆ ಶಾಕ್ ಎದುರಾಗುತ್ತಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಜನರು ನಾಳೆಯಿಂದ ಕಸದ ಸೆಸ್ ಕಟ್ಟಬೇಕಿದೆ. ಅಂದರೆ, ಇನ್ನು ಮುಂದೆ ಮನೆ, ಮನೆಯ ಕಸಕ್ಕೂ ಸೆಸ್ ಕಟ್ಟಬೇಕು. ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯಿಂದ ಕಸದ ಮೇಲೆ ತೆರಿಗೆ ಹೇರಿಕೆ ಮಾಡಿರುವ ಹಿನ್ನೆಲೆಯಲ್ಲಿ ಅದನ್ನು ಜನರ ಮೇಲೆ ಹಾಕಲು ನಿರ್ಧರಿಸಲಾಗಿದೆ. ಕಟ್ಟಡದ ವಿಸ್ತೀರ್ಣದ ಮೇಲೆ ಶುಲ್ಕ ನಿಗದಿ ಮಾಡಲಾಗುತ್ತಿದೆ.
- 6೦೦ ಚದರ ಅಡಿವರೆಗಿನ ಕಟ್ಟಡಗಳಿಗೆ ತಿಂಗಳಿಗೆ 1೦. ರೂ.
- 6೦೦ ಚದರ ದಿಂದ 1೦೦೦ ಚದರವರೆಗಿನ ಕಟ್ಟಡಗಳಿಗೆ ತಿಂಗಳಿಗೆ 5೦ ರೂ.
- 1 ಸಾವಿರದಿಂದ 2 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 1೦೦ ರೂ.
- 2 ಸಾವಿರದಿಂದ 3 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 15೦ ರೂ.
- 3 ಸಾವಿರ ದಿಂದ 4 ಸಾವಿರ ಚದರ ಅಡಿಗಳ ಕಟ್ಟಡಗಳಿಗೆ ತಿಂಗಳಿಗೆ 2೦೦ ರೂ.
- 4 ಸಾವಿರ ಚದರ ಅಡಿಗಳ ಮೇಲ್ಪಟ್ಟ ಕಟ್ಟಡಗಳಿಗೆ ತಿಂಗಳಿಗೆ 4೦೦ ರೂ. ಸೆಸ್ ಫಿಕ್ಸ್ ಮಾಡಲಾಗಿದೆ. ಈ ರೀತಿಯ ಘನತ್ಯಾಜ್ಯ ನಿರ್ವಹಣೆಯ ಸೆಸ್ ನಿಂದಾಗಿ ವಾರ್ಷಿಕವಾಗಿ 600 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ.