ಬೆಂಗಳೂರು: ಯುಗಾದಿ (Ugadi) ಹಬ್ಬದ ಜನರಿಗೆ ಇಂದು ‘ಹೊಸ ತೊಡಕು’ ಆಚರಿಸಲಾಗುತ್ತಿದೆ. ಹೀಗಾಗಿ ದಕ್ಷಿಣ ಕರ್ನಾಟಕದ ಬಹುತೇಕರ ಮನೆಗಳಲ್ಲಿ ಮಾಂಸದ ಘಮ ಹೆಚ್ಚಾಗಿದೆ. ಅಲ್ಲದೇ, ಸಸ್ಯಹಾರಿಗಳ ಮನೆಯಲ್ಲಿ ಪಾಯಸ, ಸಿಹಿ ಅಡುಗೆಯು ಭೋಜನ ಇರಲಿದೆ.
ಯುಗಾದಿಯ ಮಾರನೇ ದಿನವನ್ನು ಹೊಸ ವರ್ಷದ ಸಂಭ್ರಮವಾಗಿ ಆಚರಿಸಲಾಗುವುದು. ಮಾಂಸಾಹಾರಿಗಳಿಗೆ ಈ ದಿನ ಹೆಚ್ಚು ಪ್ರಿಯ. ಚಿಕನ್, ಮಟನ್, ಫಿಶ್ ಅಂಗಡಿಗಳಲ್ಲಿ ಜನ ತುಂಬಿರುತ್ತಾರೆ. ಖಾರದೂಟದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹೊಸ ತೊಡಕಿನ ದಿನ ಚಿಕನ್, ಮಟನ್ ಬೆಲೆ ಹೆಚ್ಚಿರುತ್ತದೆ. ಹೀಗಾಗಿ ಹೊರ ರಾಜ್ಯಗಳಿಂದಲೂ ವಿಶೇಷ ತಳಿಯ ಕುರಿ, ಮೇಕೆಗಳನ್ನು ತರಿಸಿ ಮಾರುವುದುಂಟು. ಕೆಜಿ ಲೆಕ್ಕ ಇರಲಿಲ್ಲ. ಗುಡ್ಡೆ ಲೆಕ್ಕದಲ್ಲಿ (ಗುಡ್ಡೆಮಾಂಸ) ಮಾರಾಟವಾಗುತ್ತಿತ್ತು. ಈಗಲೂ ಆ ರೀತಿಯ ವ್ಯವಸ್ಥೆ ಇದೆ.
ಹೊಸ ತೊಡಕಿನ (Hosatodaku) ದಿನದಂದೇ ಮುಸ್ಲಿಂರ ಪವಿತ್ರ ರಂಜಾನ್ ಇರುವುದರಿಂದಾಗಿ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದೆ.