ಬೆಂಗಳೂರು: ರಾಜ್ಯ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಛಾಟನೆಯಾಗಿರುವ ಹಿನ್ನೆಲೆಯಲ್ಲಿ ಹಲವಾರು ನಾಯಕರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ವಹಿಸಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾಗುತ್ತಿದ್ದಂತೆ ಸಾಲು ಸಾಲು ನಾಯಕರುಗಳು ಮೌನಕ್ಕೆ ಶರಣಾಗಿದ್ದಾರೆ. ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ವಿ.ಸೋಮಣ್ಣ, ಯತ್ನಾಳ್ ಬಣದ ರೆಬೆಲ್ ನಾಯಕರುಗಳಾದ ಜಿ.ಎಂ. ಸಿದ್ದೇಶ್ವರ್, ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಸೈಲೆಂಟ್ ಆಗಿದ್ದಾರೆ.
ಕೇಂದ್ರದ ಶಿಸ್ತು ಸಮಿತಿ ಕಳೆದ ಮೂರು ದಿನಗಳ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಪಕ್ಷದಿಂದ ಉಚ್ಛಾಟಿಸಿದೆ. ಆದರೆ, ಯತ್ನಾಳ್ ಉಚ್ಚಾಟನೆ ಬಳಿಕ ಎಲ್ಲರೂ ಸೈಲೆಂಟ್ ಆಗಿದ್ದಾರೆ.
“ಕರ್ನಾಟಕ ನ್ಯೂಸ್ ಬೀಟ್” ಈ ಮೌನದ ಹಿಂದಿನ ಸತ್ಯವನ್ನು ಹಾಗೂ ಕಥೆಯನ್ನು ರಿವೀಲ್ ಮಾಡುತ್ತಿದೆ.
ಅಷ್ಟಕ್ಕೂ ಈ ಮೌನ ಏಕೆ?
-ಬಸನಗೌಡ ಪಾಟೀಲ್ ಯತ್ನಾಳ್ ಮೂಲಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ಬದಲಾವಣೆಗೆ ವೇದಿಕೆ ಸಿದ್ಧಪಡಿಸಿದ್ದ ನಾಯಕರುಗಳು.
– ಯತ್ನಾಳ್ ಮೂಲಕವೇ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಠಕ್ಕರ್ ಕೊಡಿಸುತ್ತಿದ್ದ ನಾಯಕರುಗಳು.
-ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಎಷ್ಟೇ ಹೇಳಿಕೆಗಳನ್ನು ನೀಡಿದ್ರೂ ಸುಮ್ಮನಿದ್ದ ನಾಯಕರುಗಳು.
-ಯಾವಾಗ ಯತ್ನಾಳ್ ವಿರುದ್ಧ ಕೇಂದ್ರದ ಶಿಸ್ತು ಸಮಿತಿ ಎಂಟ್ರಿ ಕೊಟ್ಟು ಆ್ಯಕ್ಷನ್ ತೆಗೆದುಕೊಂಡ್ರೋ. ನಮಗ್ಯಾಕೆ ಈ ಸುದ್ದಿ ಎಂದು ಮೌನಕ್ಕೆ ಶರಣಾದ ನಾಯಕರು.
-ನಮ್ಮ ವಿರುದ್ಧ ಆ್ಯಕ್ಷನ್ ಆದ್ರೆ ಏನು ಮಾಡುವುದು?
– ನಾವು ಇಂದು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದೇವೆ ಎಂದರೆ, ಅದಕ್ಕೆ ಪಕ್ಷ ಕಾರಣ.
– ಈಗ ನಾವು ಯಾಮಾರಿ ಏನೇ ಮಾತನ್ನಾಡಿದ್ರೂ ನಮಗೆ ಮುಂದೆ ಅಪಾಯ ನಿಶ್ಚಿತ.
ಈ ಎಲ್ಲ ಕಾರಣಗಳಿಂದಾಗಿ ಸೈಲೆಂಟ್ ಆಗಿ ಬಿಡೋಣ ಎಂದು ನಾಯಕರುಗಳು ಮೌನಕ್ಕೆ ಶರಣಾಗಿದ್ದಾರೆ.
ಜೊತೆಗೆ ಬಿಜೆಪಿ ಹೈಕಮಾಂಡ್ ನಾಯಕರ ಎಂದೆಂದಿಗೂ ಯುವಕರಿಗೆ, ಹೊಸ ಮುಖಕ್ಕೆ ಮಣೆ ಹಾಕುತ್ತದೆ. ಹೀಗಾಗಿ ಈಗ ನಾವು ಮಾತನಾಡಿ ಏನೇ ಮಾಡಿದ್ರೂ ಅದು ನಮಗೆ ಮುಂದೆ ಅಪತ್ತು ತರಬಹುದು. ಹೀಗಾಗಿ, ಮೌನವಾಗಿರೋಣ ಎಂಬ ನಿರ್ಧಾರ ಮಾಡಿರುವ ಸಾಲು ಸಾಲು ನಾಯಕರುಗಳು ಮೌನವಾಗಿದ್ದಾರೆ. ಅಲ್ಲವಾ?