ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆ ಹಲವು ನಾಯಕರಿಗೆ ಖುಷಿ ನೀಡಿದರೆ, ಹಲವರಿಗೆ ಬೇಸರ ನೀಡಿದೆ. ಹೀಗಾಗಿ ರೆಬೆಲ್ಸ್ ನಾಯಕರು ರಕ್ಷಣೆಗೆ ಮುಂದಾಗಿದ್ದಾರೆ. ಹೀಗಾಗಿ ಭಿನ್ನಮತೀಯ ಮುಖಂಡರು ಬೆಂಗಳೂರಿನಲ್ಲಿ ಹೈವೋಲ್ಟೇಜ್ ಸಭೆ ನಡೆಸಿದರು.
ಉಚ್ಛಾಟನೆಯ ನಿರ್ಧಾರವನ್ನು ಹಿಂಪಡೆಯುವಂತೆ ಹೈಕಮಾಂಡ್ ಗೆ ಮನವಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಯತ್ನಾಳ್ ಉಚ್ಛಾಟನೆ ಭಿನ್ನಮತೀಯರಿಗೆ ನೋವು ತಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ.
ಈ ಸಭೆಯಲ್ಲಿ ಯತ್ನಾಳ್ ಕೂಡ ಭಾಗವಹಿಸಿದ್ದರು. ಶೋಕಾಸ್ ನೋಟಿಸ್ ಪಡೆದ ಬಿಪಿ ಹರೀಶ್ ಸಹ ಇದ್ದರು. ಇನ್ನುಳಿದಂತೆ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಸಂಸದ ಜಿಎಂ ಸಿದ್ದೇಶ್ವರ, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಮಾಜಿ ಸಂಸದ ಪ್ರತಾಪ್ ಸಿಂಹ, ಎನ್‌ಆರ್ ಸಂತೋಷ್, ಮಾಜಿ ಸಂಸದ ಬಿವಿ ನಾಯಕ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆ ಹಲವು ಚರ್ಚೆಗೆ ಕಾರಣವಾಗುತ್ತಿದೆ.