ಚಿಕ್ಕಮಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಛಾಟನೆ ಆಗಿರುವ ವಿಷಯವಾಗಿ ಸಚಿವ ಭೈರತಿ ಸುರೇಶ್ ವ್ಯಂಗ್ಯವಾಡಿದ್ದಾರೆ.
ತರೀಕೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಒಬ್ಬರನ್ನೇ ಉಚ್ಛಾಟನೆ ಮಾಡಿಬಿಟ್ರಾ? ಬಿಜೆಪಿಯೊಳಗೆ ಆಂತರಿಕ ಜಗಳ ಬಹಳ ಇತ್ತು. ಬಿಜೆಪಿಯಲ್ಲಿ ಹತ್ತು ಗುಂಪುಗಳಿದ್ದವು. ಹತ್ತು ಗುಂಪಲ್ಲಿ ಯಾರು ಹೋಗ್ತಾರೋ? ಯಾರು ಕೆಳಗಡೆ ಹೋಗ್ತಾರೋ? ಆ ದೇವರಿಗೆ ಗೊತ್ತು ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿಯವರು ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಪಕ್ಕದ ತಟ್ಟೆಯಲ್ಲಿ ನೋಣ ಹುಡುಕುವ ಗುಣದವರು. ಕರ್ನಾಟಕದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಯಾರನ್ನು ಸಸ್ಪೆಂಡ್ ಮಾಡ್ತಾರೋ? ಯಾರನ್ನು ಹೊರಗೆ ಹಾಕ್ತಾರೋ? ಕಾದು ನೋಡೋಣ ಎಂದು ಹೇಳಿದ್ದಾರೆ.