ವಿಜಯಪುರ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ.
ಯಾರು ಹಿಂದೂ ಧರ್ಮವನ್ನು ಒಪ್ಪುತ್ತಾರೆ ಅವರಿಗೆ ದಸರಾ ಉದ್ಘಾಟನೆಗೆ ಅಧಿಕಾರವಿದೆ. ಇಸ್ಲಾಂನಲ್ಲಿ ಮುಸ್ಲಿಂಮೇತರ ಯಾವುದೇ ಧರ್ಮ ಒಪ್ಪುವುದಿಲ್ಲ. ಈಗಾಗಲೇ ಬಾನು ಮುಷ್ತಾಕ್ ಕನ್ನಡ ಬಾವುಟಕ್ಕೆ ಅಪಮಾನ ಮಾಡಿದ್ದಾರೆ. ಅರಿಷಿಣ, ಕುಂಕುಮ ಎಂದು ಲೇವಡಿ ಮಾಡಿದ್ದಾರೆ. ನಾಡ ದೇವಿ ಭುವನೇಶ್ವರಿ ಬಗ್ಗೆಯೂ ಲೇಖಕಿ ಬಾನು ಮುಷ್ತಾಕ್ ಅಪಮಾನ ಮಾಡಿದ್ಧಾರೆ.
ಚಾಮುಂಡಿ ತಾಯಿ ಪೂಜೆ ಮಾಡಲು ಅಕ್ಷತೆ ಹೂವು ಹಾಕಲು ಬಾನು ಅವರಿಗೆ ನೈತಿಕ ಹಕ್ಕಿಲ್ಲ. ಬಾನು ಮುಷ್ತಾಕ್ ನಮ್ಮ ಧರ್ಮಕ್ಕೆ ಸಂಬಂಧವಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಹಿಂದೂ ಧರ್ಮದ ಯಾವುದೇ ಮಹಿಳೆ ದಸರಾ ಉದ್ಘಾಟನೆ ಮಾಡಬಹುದು. ಅವರಿಗೆ ಇಸ್ಲಾಂ ಧರ್ಮದ ಬಗ್ಗೆ ಗೌರವಿದ್ದರೆ ದಸರಾ ಉದ್ಘಾಟನೆ ಬಿಟ್ಟು ಕೊಡಬೇಕೆಂದು ಯತ್ನಾಳ ಒತ್ತಾಯಿಸಿದ್ದಾರೆ. .